ಸಿದ್ದರಾಮಯ್ಯ ಅವರು ಅನರ್ಹರ ಬಗ್ಗೆ ಸಿಡಿದೆದ್ದಿದ್ದು, ಹೋದ ಕಡೆಗಳಲ್ಲಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಸಿದ್ದರಾಮಯ್ಯ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದುಗೆ ತಿರುಗೇಟು ನೀಡಿದ್ದಾರೆ.
ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಮನಬಂದಂತೆ ಮಾತನಾಡ್ತಿದ್ದಾರೆ. ಅನರ್ಹರು ಚುನಾವಣೆ ನಿಲ್ಲಬಹುದು ಎಂದು ಕೋರ್ಟ್ ಸಹ ಹೇಳಿದೆ. ಆದರೆ ಅವರನ್ನು ಅನರ್ಹರು ಅಂತಾ ಅನ್ನೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದರು.