ಅನಾಥ ಬಾಲಕಿಗೆ ನೆರವಾದ ರೇಣುಕಾಚಾರ್ಯ

Date:

ಕೋವಿಡ್ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಾಡುತ್ತಿರುವ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ತಂದೆ-ತಾಯಿ ಕಳೆದುಕೊಂಡು ಅನಾಥವಾಗಿದ್ದ ಬಾಲಕಿಗೆ ಶಾಸಕರು ನೆರವಾಗಿದ್ದಾರೆ.
ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದ ಯುಕ್ತಿ ಎಂಬ ಬಾಲಕಿ ತಂದೆ-ತಾಯಿ ಕಳೆದುಕೊಂಡಿದ್ದು, ಶಾಸಕ ಎಂ. ಪಿ. ರೇಣುಕಾಚಾರ್ಯ ಬಾಲಕಿಗೆ ಸಹಾಯ ಮಾಡಿದ್ದಾರೆ. 25 ಸಾವಿರ ರೂಪಾಯಿ ಸಹಾಯ ಮಾಡಿದ್ದು, ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆಯನ್ನು ಸಹ ನೀಡಿದ್ದಾರೆ.
ನಿತ್ಯಾನಂದ ಹಾಗೂ ರಾಧಾ ದಂಪತಿಯ ಪುತ್ರಿ ಯುಕ್ತಿ ಈಗ ಅನಾಥಳಾಗಿದ್ದಾಳೆ. ಅಮ್ಮನ ವಾತ್ಸಲ್ಯದಲ್ಲಿ ಬೆಳೆಯಬೇಕಿದ್ದ ಯುಕ್ತಿ ಹುಟ್ಟಿದ 10 ತಿಂಗಳಿಗೆ ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ತಂದೆ ನಿತ್ಯಾನಂದ ಹಾಗೂ ಅಜ್ಜಿ ವೀರಮ್ಮ ಆರೈಕೆಯಲ್ಲಿ ಬೆಳೆಯುತ್ತಿದ್ದಳು.


ನಿತ್ಯಾನಂದ ಅವರು ಜೀವನ ನಿರ್ವಹಣೆಗೆ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದರು. ತಾನು ಹುಟ್ಟಿದ 10 ತಿಂಗಳಿಗೇ ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ ಯುಕ್ತಿಯ ಜೀವನದಲ್ಲಿ 12 ವರ್ಷದ ನಂತರ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ.
ಕೋವಿಡ್ ಸೋಂಕು ತಗುಲಿದ್ದ ನಿತ್ಯಾನಂದ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಯುಕ್ತಿ ಮನೆಗೆ ರೇಣುಕಾಚಾರ್ಯ ದಂಪತಿ ಸಮೇತ ತೆರಳಿ ಸಾಂತ್ವನ ಹೇಳಿದರು.
ತಂದೆ-ತಾಯಿಗಳ ಮಡಿಲಲ್ಲಿ ಆಟವಾಡುತ್ತಾ ಬೆಳೆಯಬೇಕಾಗಿದ್ದ ಬಾಲಕಿ ಯುಕ್ತಿ, ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿರುವ ಸುದ್ದಿ ತಿಳಿದು ದೊಡ್ಡೇರಹಳ್ಳಿ ಗ್ರಾಮದ ಅವರ ಸಂಬಂಧಿಕರ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ಆಕೆಗೆ 25,000 ರೂಪಾಯಿಗಳನ್ನು ನೀಡಿದರು.


ಚಿಕ್ಕ ವಯಸ್ಸಿಗೆ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥವಾಗಿದ್ದ ಬಾಲಕಿ ಯುಕ್ತಿ ಅವಳನ್ನು ನೋಡಿ ಒಂದು ಕ್ಷಣ ಭಾವುಕರಾದ ರೇಣುಕಾಚಾರ್ಯ ಆಕೆಗೆ ತಂದೆ ತಾಯಿ ಸ್ಥಾನದಲ್ಲಿ ನಾನು ನಿಂತು ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
“ಕೊರೊನಾ ಹೆಮ್ಮಾರಿ ಎಷ್ಟೋ ಮಕ್ಕಳನ್ನು ಅನಾಥವಾಗಿಸಿದೆ. ಯುಕ್ತಿಯ ಕಥೆ ಕೇಳಿ ಮನಸ್ಸಿಗೆ ನೋವಾಯಿತು. ಯಾರೂ ಸಹ ಕೊರೊನಾ ಅಲಕ್ಷಿಸಬೇಡಿ. ಎಲ್ಲರೂ ಕೊರೊನಾ ಲಸಿಕೆ ಪಡೆಯಿರಿ. ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಿ” ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...