ಅನಾರೋಗ್ಯದಿಂದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನಿಧನ
ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಸೆ.19ರಂದು ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಬಿಜೆಪಿ ವಿರುದ್ಧ ಶೇ. 40 ಪರ್ಸೆಂಟೆಜ್ ಆರೋಪ ಮಾಡಿದ್ದ ಕೆಂಪಣ್ಣ ಅವರು ಗುತ್ತಿಗೆದಾರರ ಪರ ಹೋರಾಟ ಮಾಡಿದ್ದರು.
ಶಾಸಕರು, ಸಚಿವರು ಕಮಿಷನ್ ಕೇಳುತ್ತಿದ್ದರೆ ಈಗ ಅಧಿಕಾರಿಗಳ ಸರದಿ. ನಾವು ಶಾಸಕರು, ಸಚಿವರಿಗೆ ಕೊಡಬೇಕಾಗುತ್ತದೆ ಕಮಿಷನ್ ನೀಡಿ ಎಂದು ಅವರೇ ಕೇಳುತ್ತಾರೆ ಎಂದು ಕೆಂಪಣ್ಣ ಆರೋಪಿಸಿದ್ದರು. ಪ್ಯಾಕೇಜ್ ಟೆಂಡರ್ ಕರೆಯಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೂಚಿಸಿದ್ದಾರೆ. ಬಿಬಿಎಂಪಿ ಆಯುಕ್ತರ ಮಾತಿಗೂ ಬೆಲೆ ಇರುವುದಿಲ್ಲ. ಎಂಜಿನಿಯರ್ಗಳೆಲ್ಲ ಟೆಂಡರ್ ಕರೆಯುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದರು.