ಜೈಲಿನಿಂದ ಬೇಲ್ ಮೂಲಕ ಹೊರಬಂದ ಡಿ.ಕೆ. ಶಿವಕುಮಾರ್ ಅವರು ಅನಾರೋಗ್ಯದ ಕಾರಣಕ್ಕೆ ನಿನ್ನೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಶಿವಕುಮಾರ್ ಆಸ್ಪತ್ರೆಯಲ್ಲೇ ಇರಲಿದ್ದಾರೆಂದು ಕುಟುಂಬದವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ರಾಜಕೀಯ ನಾಯಕರಿಗೆ ಮನವಿ ಮಾಡಿರುವ ಡಿ.ಕೆ. ಶಿವಕುಮಾರ್ ಕುಟುಂಬಸ್ಥರು, ವೈದ್ಯರು ಕಡ್ಡಾಯ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿರುವುದರಿಂದ ಕನಿಷ್ಠ ಮೂರು ದಿನಗಳ ಕಾಲ ಯಾರೂ ಅವರ ಭೇಟಿಗೆ ಬರಬಾರದೆಂದು ಅಭಿಮಾನಿಗಳಿಗೆ ಕುಟುಂಬ ಸದಸ್ಯರು ಕೋರಿದ್ದಾರೆ.