ಅನುಷ್ಕಾ ಶರ್ಮಾಗೆ ಹೆಣ್ಣು ಮಗು; ಚಹಲ್ ಮಾಡಿದ ಕಾಮೆಂಟ್ ಗೆ ಎಲ್ಲರೂ ಎದ್ದು ಬಿದ್ದು ನಗುತ್ತಿದ್ದಾರೆ..

admin
1 Min Read

ಇಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಈ ವಿಷಯವನ್ನು ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ವಿರುಷ್ಕಾ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

 

ಟ್ವಿಟರ್ ಮೂಲಕ ವಿರಾಟ್ ಕೊಹ್ಲಿ ಅವರು ಹೆಣ್ಣು ಮಗು ಜನಿಸಿರುವುದರ ಬಗ್ಗೆ ಹಂಚಿಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ ಅವರ ಟ್ವೀಟ್ ಗೆ ಸಾಕಷ್ಟು ಸೆಲೆಬ್ರೆಟಿಗಳು ರಿಪ್ಲೈ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಅವರು ಸಹ ವಿರಾಟ್ ಕೊಹ್ಲಿ ಅವರ ಟ್ವೀಟ್ ಗೆ ಕಂಗ್ರಾಜುಲೇಷನ್ಸ್ ಎಂದು ರಿಪ್ಲೈ ಮಾಡಿದ್ದರು. ಇನ್ನು ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಚಹಲ್ ಅವರೂ ಸಹ ವಿರಾಟ್ ಕೊಹ್ಲಿ ಅವರ ಟ್ವೀಟ್ ಗೆ ರಿಪ್ಲೈ ಮಾಡಿದ್ದಾರೆ.

 

ಯಾವಾಗಲೂ ತರಲೆ ಮಾಡುತ್ತಿರುವ ಯಜುವೇಂದ್ರ ಚಹಲ್ ಅವರು ಇಲ್ಲಿಯೂ ಸಹ ತಮ್ಮ ತರಲೆಯನ್ನು ಮುಂದುವರಿಸಿದ್ದಾರೆ. ಕೇವಲ ವಿರಾಟ್ ಕೊಹ್ಲಿ ಅವರಿಗೆ ಮಾತ್ರ ಶುಭಾಶಯ ತಿಳಿಸುವ ಬದಲು ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ & ವಿರಾಟ್ ಕೊಹ್ಲಿ ಇಬ್ಬರಿಗೂ ಸಹ ಚಹಲ್ ಅವರು ಕಂಗ್ರಾಜುಲೇಷನ್ಸ್ ಎಂದು ಕಾಮೆಂಟ್ ಮಾಡುವ ಮುಖಾಂತರ ತರ್ಲೆ ಮಾಡಿದ್ದಾರೆ. ಚಹಲ್ ಅವರ ಟ್ವೀಟ್ ನೋಡಿ ಕ್ರಿಕೆಟ್ ಅಭಿಮಾನಿಗಳು ಸಿಕ್ಕಾಪಟ್ಟೆ ನಕ್ಕಿದ್ದಂತೂ ನಿಜ.

 

 

ಕೆಲವೇ ನಿಮಿಷಗಳ ಬಳಿಕ ಈ ಟ್ವೀಟ್ ಅನ್ನೋ ಚಹಲ್ ಅವರು ಡಿಲೀಟ್ ಮಾಡಿದ್ದು ಇದೀಗ ಕೇವಲ ವಿರಾಟ್ ಕೊಹ್ಲಿ ಅವರಿಗೆ ಕಂಗ್ರಾಜುಲೇಷನ್ಸ್ ಎಂದು ರಿಪ್ಲೈ ಮಾಡಿದ್ದಾರೆ.

Share This Article
Leave a Comment