ಅನ್ ಲಾಕ್ ಆದ ಮೊದಲ ದಿನವೇ ಧರ್ಮಸ್ಥಳದಲ್ಲಿ ಭಕ್ತಸಾಗರ

Date:

ಅನ್‌ಲಾಕ್ ಆದ ಮೊದಲ ದಿನವೇ ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಭಕ್ತ ಸಾಗರ ಹರಿದುಬಂದಿದೆ. ರಾಜ್ಯ ಸರ್ಕಾರ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ದರ್ಶನಕ್ಕೆ ಸೋಮವಾರದಿಂದ ಅವಕಾಶ ಮಾಡಿಕೊಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಆಗಮಿಸಿದ್ದಾರೆ. ಪ್ರಾತಃ ಕಾಲದಲ್ಲೇ ನೇತ್ರಾವತಿ ಸ್ನಾನಘಟ್ಟದಲ್ಲಿ ತೀರ್ಥ ಸ್ನಾನ ಮಾಡಿ ಭಕ್ತರು ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ.

ಬೆಳಗ್ಗಿನಿಂದಲೇ ಭಕ್ತರು ಸರತಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದು, ದೇವಸ್ಥಾನದೊಳಗೆ ಭಕ್ತರು ಪ್ರವೇಶಿಸುವಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಸೂಚಿಸಿದೆ.
ಧರ್ಮಸ್ಥಳದಲ್ಲಿ ಎಲ್ಲಾ ಸೇವೆಗಳೂ ಆರಂಭಗೊಂಡಿದ್ದು, ಅನ್ನ ಪ್ರಸಾದವೂ ನಿತ್ಯ ನಿರಂತರವಾಗಿ ನಡೆಯಲಿದೆ. ಆಟೋಮ್ಯಾಟಿಕ್ ಟೆಂಪರೇಚರ್ ಚೆಕ್ ಮಿಷನ್‌ನಲ್ಲಿ ಭಕ್ತರ ದೇಹದ ಉಷ್ಣಾಂಶ ತಪಾಸಣೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ದೇಹದ ಉಷ್ಣಾಂಶ ಹೆಚ್ಚಿದ್ದರೆ ಮೆಷಿನ್‌ನಲ್ಲಿ ಕೆಂಪು ದೀಪ ಉರಿದು ಬೀಪ್ ಸೌಂಡ್ ಬರುತ್ತದೆ.


ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಹಾಗೂ ಸರ್ಪಸಂಸ್ಕಾರ ಸೇವೆಗಳಿಗೆ ಅವಕಾಶವಿಲ್ಲ.
ಇನ್ನುಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರಿಗೆ ಪ್ರವೇಶ ಮುಕ್ತವಾಗಿದ್ದು, ಕೊರೊನಾ ನಿಯಮದ ಪ್ರಕಾರ ಅವಕಾಶ ನೀಡುತ್ತಿದೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...