ಅನ್ ಲಾಕ್ 3.0: ಮಾಲ್,ಥಿಯೇಟರ್ ಗೆ ಅವಕಾಶ? ಇಲ್ಲಿದೆ ಮಾಹಿತಿ

Date:

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದು, ಹಂತಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಹಲವು ಜಿಲ್ಲೆಗಳು ಅನ್‌ಲಾಕ್ ಆಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ.
ಇದೀಗ ಜುಲೈ 5ರಿಂದ ಅನ್‌ಲಾಕ್ 0.3 ಜಾರಿಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮಾಲ್‌, ಸಿನಿಮಾ ಮಂದಿರಗಳು, ಪಬ್, ಕ್ಲಬ್, ಬಾರ್‌ಗಳಿಗೆ ಅನುಮತಿ ನೀಡುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ಕೊರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ತಗ್ಗಿದರೆ ಅನ್‌ಲಾಕ್ 3.0 ಜಾರಿಗೆ ತರಬಹುದು ಎಂದು ತಜ್ಞರು ಸಲಹೆ ನೀಡಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ 1.97ರಷ್ಟಿರುವ ಕಾರಣ ಅನ್‌ಲಾಕ್ ಮಾಡುವ ಸಾಧ್ಯತೆ ಇದೆ.
ಈಗ ಅಂಗಡಿ ಮಳಿಗೆಗಳಿಗೆ ಅವಕಾಶ ಕೊಟ್ಟಿರುವಂತೆಯೇ ಮಾಲ್‌ಗಳನ್ನು ಸಂಜೆವರೆಗೂ ತೆರೆಯಲು ಅನುಮತಿ ನೀಡಬಹುದಾಗಿದೆ. ಅತಿ ಕಡಿಮೆ ಜನರ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಮಕ್ಕಳಿಗೆ ಪ್ರವೇಶ ನಿರ್ಬಂಧ ಹೇರುವ ಸಂಭವವಿದೆ. ಬಾರ್‌ಗಳಲ್ಲಿಯೂ ಟೇಬಲ್ ಸರ್ವೀಸ್‌ಗೆ ಅವಕಾಶ ನೀಡುವುದಾಗಿ ತಿಳಿದುಬಂದಿದೆ.
ಆದರೆ ಸಿನಿಮಾ ಮಂದಿರಗಳಿಗೆ ಇಷ್ಟು ಬೇಗ ಅವಕಾಶ ನೀಡುವುದು ಅನುಮಾನವಿದ್ದು, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇನ್ನಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.


ಕಳೆದ ಏಪ್ರಿಲ್ 27ರಿಂದ ಕರ್ನಾಟಕದಲ್ಲಿ ಜಾರಿ ಮಾಡಲಾಗಿದ್ದ ಕೋವಿಡ್ -19 ಲಾಕ್‌ಡೌನ್‌ ಅನ್ನು ಜೂನ್ 14ರ ನಂತರ ಅಲ್ಪ ಸಡಿಲಿಕೆ ಮಾಡಲಾಗಿತ್ತು. ಜೂನ್ 21ರ ನಂತರ ಅನ್‌ಲಾಕ್ 2.0 ಘೋಷಣೆಯಾಗಿದ್ದು, ಕೆಲವು ನಿರ್ಬಂಧಗಳೊಂದಿಗೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಮೊದಲು ಹದಿನಾರು ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಿ ನಂತರ ಆ ಪಟ್ಟಿಗೆ 6 ಜಿಲ್ಲೆಗಳನ್ನು ಸೇರಿಸಲಾಗಿತ್ತು.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...