ಅಪರೂಪದ ದಾಖಲೆ ಬರೆದ ಭುವನೇಶ್ವರ್ ಕುಮಾರ್

Date:

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕ ಭುವನೇಶ್ವರ್ ಕುಮಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಒಳ್ಳೆಯ ದಾಖಲೆ ಅನ್ನುತ್ತೀರೋ ಅಥವಾ ಕೆಟ್ಟ ದಾಖಲೆ ಅನ್ನುತ್ತೀರೋ ಅದು ನಿಮಗೆ ಬಿಟ್ಟಿದ್ದು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ಮೊದಲ ನೋ ಬಾಲ್ ಹಾಕಿದ ವಿಚಿತ್ರ ದಾಖಲೆಗೆ ವೇಗಿ ಭುವನೇಶ್ವರ್ ಕುಮಾರ್ ಕಾರಣರಾಗಿದ್ದಾರೆ. ಭಾರತ-ಶ್ರೀಲಂಕಾ ಮಧ್ಯೆ ಜುಲೈ 20ರ ಮಂಗಳವಾರ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಭುವಿ ಈ ದಾಖಲೆ ನಿರ್ಮಿಸಿದ್ದಾರೆ.
ಪಂದ್ಯದ 5ನೇ ಓವರ್‌ನಲ್ಲಿ ಭುವನೇಶ್ವರ್ 6 ವರ್ಷಗಳ ನಂತರ ಮೊದಲ ನೋ ಬಾಲ್ ಎಸೆದರು. ನೋ ಬಾಲ್ ಗೆರೆ ದಾಟಿ ಭುವಿ ಬೌಲಿಂಗ್ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಆದರೆ ವಿಶೇಷವೆಂದರೆ ಭುವಿ ಕಡೇಯಸಾರಿ ನೋ ಬಾಲ್ ಹಾಕಿದ್ದು 2015 ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ.


ಅದಾಗಿ ಇಲ್ಲೀವರೆಗೂ ಭುವಿ ಒಂದೇ ಒಂದು ನೋ ಬಾಲ್ ಹಾಕಿರಲಿಲ್ಲ. ಅಂದರೆ ಭರ್ಜರಿ 3903 ಎಸೆತಗಳ ಬಳಿಕ ಭುವನೇಶ್ವರ್ ಮೊದಲ ನೋ ಬಾಲ್ ಹಾಕಿದ್ದರು. ಪಂದ್ಯದಲ್ಲಿ ಒಟ್ಟು 10 ಓವರ್‌ ಎಸೆದಿದ್ದ ಭುವಿ 54 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಅವಿಷ್ಕಾ ಫೆರ್ನಾಂಡೋ, ಚರಿತ್ ಅಸಲಂಕಾ ಮತ್ತು ದುಷ್ಮಂತ ಚಮೀರ ವಿಕೆಟ್‌ಗಳು ಭುವಿಗೆ ಸಿಕ್ಕಿದ್ದವು.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...