ಬೆಂಗಳೂರು: ಕಿಡ್ನಾಪ್ ಕೇಸ್‍ನಲ್ಲಿ ಬೇಲ್ ಪಡೆದಿದ್ದ ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸ್‍ನಲ್ಲಿ ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಈ ನಡುವೆ ಇಂದು ಮುಖ್ಯ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೇ 20 ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು.
ಸಂತ್ರಸ್ತೆಯ ಸ್ವ-ಇಚ್ಚಾ ಹೇಳಿಕೆಯನ್ನು ಓದಿದ ಎಸ್‍ಪಿಪಿ, ನಾನು ಆ ಮನೆಗೆ ಸೇರಿದಾಗ ನನ್ನ ಪ್ರಜ್ವಲ್ ರೇವಣ್ಣ ಬಗ್ಗೆ ಎಚ್ಚರಿಕೆ ನೀಡುತ್ತಾ ಇದ್ದರು. ಪ್ರಜ್ವಲ್ ಪದೇ ಪದೇ ಬಂದು ಮೈ ಮುಟ್ಟಿ ಎಳೆಯುತ್ತಾ ಇದ್ದರು. ಎಣ್ಣೆ ಹಚ್ಚು ಬಾ ಎಂದು ಹೇಳುತ್ತಾ ಇದ್ದರು. ರೇವಣ್ಣ ಕೂಡ ನನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಹೊಟ್ಟೆ ಎದೆಯ ಭಾಗವನ್ನು ಮುಟ್ಟಿ ಎಳೆದಾಡಿದ್ದಾರೆ. ರೇವಣ್ಣ ವರ್ತನೆ ಬಗ್ಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಲಿಲ್ಲ ಎಂದರು.
ಆದ್ರೆ ಈ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆ.436 ಅಡಿ ಜಾಮೀನು ನೀಡುವಂತಿಲ್ಲ. ನಾನ್ ಬೇಲೆಬಲ್ ಸೆಕ್ಷನ್ ಇರೋದ್ರಿಂದ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕು. ಹೀಗಾಗಿ ಸೆ.436 ಅಡಿ ಈ ಕೋರ್ಟ್ ನಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರ ಜಾಮೀನು ಭವಿಷ್ಯ ಮೇ 20 ಕ್ಕೆ ನಿರ್ಧಾರವಾಗಲಿದೆ.
ಅಪಹರಣ ಪ್ರಕರಣ: ಸೋಮವಾರದವರೆಗೂ ರೇವಣ್ಣಗೆ ಜಾಮೀನು ಮುಂದುವರಿಕೆ
Date:



