ಅಪ್ಪನಂತೆ ಕೊಟ್ಟ ಮಾತನ್ನು ಒಂದೇ ದಿನದಲ್ಲಿ ಉಳಿಸಿಕೊಂಡ ಅಭಿಷೇಕ್ ಅಂಬರೀಷ್..!

0
292

ಚುನಾವಣೆ ಮುಗಿದ ಬಳಿಕ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಏ. 19 ಅಂದರೆ ಇಂದು ಸಿಂಗಾಪುರಕ್ಕೆ ತೆರಳಲು ಈಗಾಗಲೇ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎನ್ನಲಾದ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಆಗ ಇದಕ್ಕೆ ಉತ್ತರಿಸಿದ್ದ ನಟ ಅಭಿಷೇಕ್ ಅಂಬರೀಷ್ ಅವರು ಯಾವ ಸಿಂಗಾಪುರಕ್ಕೂ ಹೋಗಲ್ಲ ಇದೆಲ್ಲವೂ ಸುಳ್ಳು ಚುನಾವಣೆ ಮುಗಿದ ಮಾರನೇ ದಿನ ಮಂಡ್ಯಕ್ಕೆ ಬಂದು ಮಂಡ್ಯದ ಮಹಾವೀರ್ ಸರ್ಕಲ್‍ ನಲ್ಲಿ ಟೀ ಕುಡಿಯುತ್ತೇನೆ ಎಂದು ಹೇಳಿದ್ದರು ಇದೀಗ ಅವರು ಕೊಟ್ಟ ಮಾತಿನಂತೆ ಮಂಡ್ಯಕ್ಕೆ ಬಂದು ಅಭಿಷೇಕ್ ಅಂಬರೀಷ್ ಟೀ ಕುಡಿದಿದ್ದಾರೆ.

ಒಟ್ಟಾರೆ ಚುನಾವಣಾ ಸಮಯದಲ್ಲಿ ತಮ್ಮ ಮೇಲೆ ಹಾಗೂ ಸುಮಲತಾ ಅಂಬರೀಷ್ ಮೇಲೆ ಬಂದ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತು ಪಡಿಸಿದ್ದಾರೆ.