ಅಪ್ಪ ಕೋಟ್ಯಧಿಪತಿ, ಮಗನ ಕೆಲಸ ಬೇಕರಿಯಲ್ಲಿ

Date:

ಅಪ್ಪ ಕೋಟ್ಯಧಿಪತಿ, ಮಗನ ಕೆಲಸ ಬೇಕರಿಯಲ್ಲಿ

ಜೀವನದ ನಿಜವಾದ ಮೌಲ್ಯ ತಿಳಿಸಲು ಮಗನಿಗೆ ಸಾಮಾನ್ಯ ವ್ಯಕ್ತಿಯಂತೆ ದುಡಿಯಲು ಕೊಚ್ಚಿಗೆ ಕಳುಹಿಸಿದ ಕೋಟ್ಯಾಧೀಶ

dravya2
ನೀವೆಲ್ಲಾ ಸಿನಿಮಾದಲ್ಲಿ ಕೋಟ್ಯಾಧಿಪತಿ ತಂದೆ ತನ್ನ ಮಗನಿಗೆ ಜೀವನದ ಪಾಠ ಕಲಿಸಲು ಆತನಿಗೆ ಮನೆಯಿಂದ ಹೊರ ಹಾಕಿ ನೀನು ಒಂದು ತಿಂಗಳಿನಲ್ಲಿ ನಿನ್ನದೇ ಪರಿಶ್ರಮದಲ್ಲಿ ಹಣ ಸಂಪಾದಿಸು ಎಂದು ಮಗನಿಗೆ ಚಾಲೆಂಜ್ ಹಾಕುವ ಅದೆಷ್ಟೋ ಸಿನಿಮಾಗಳು ನೀವು ನೋಡಿರಲೇ ಬೇಕಲ್ಲವೇ… ಅಂತಹದ್ದೇ ಒಂದು ಸಿನಿಮೀಯ ಕಥೆ ಇಲ್ಲಿದೆ ಓದಿ. ಆದರೆ ನೆನಪಿರಲಿ ಇದು ನೈಜವಾಗಿ ನಡೆದ ಒಂದು ರಿಯಲ್ ಸ್ಟೋರಿ.
ಈ ಕೋಟ್ಯಧಿಪತಿಯ ಹೆಸರು ಸಾವ್ಜಿ ಧೋಲಾಕಿಯಾ, ಗುಜರಾತ್‍ನ ಪ್ರತಿಷ್ಠಿತ ಹರಿ ಕೃಷ್ಣ ಡೈಮಂಡ್ ಎಕ್ಸ್ ಪೋರ್ಟ್‍ನ ಮಾಲಿಕ. ಈತನ ಆದಾಯ ಎಷ್ಟು ಗೊತ್ತಾ.. ಬರೋಬ್ಬರಿ 6 ಸಾವಿರ ಕೋಟಿ..!
ಈ ವಜ್ರ ವ್ಯಾಪಾರಸ್ಥನಿಗೆ ಒಬ್ಬನೇ ಒಬ್ಬ ಮಗನಿದ್ದಾನೆ ಆತನೇ ದ್ರಾವ್ಯ. ಅಷ್ಟೆಲ್ಲಾ ಕೋಟಿಗಟ್ಟಲೇ ಹಣಕ್ಕೆ ಒಡೆಯನಾಗಿರುವ ಈತ ಈಗ ಕೇರಳದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ದುಡಿಯತ್ತಿದ್ದಾನೆ.. ಈತನ ಮಾಸಿಕ ವೇತನವೆಷ್ಟು ಗೊತ್ತಾ..? ಕೇವಲ 7000 ರೂ.
ಕಾರಣವಿಷ್ಟೇ ತನ್ನ ಮಗ ಕೇವಲ ಭೋಗಜೀವನವನ್ನು ಮಾತ್ರ ಅನುಭವಿಸದೇ ಜೀವನದಲ್ಲಿ ಕಷ್ಟ ಎಂದರೆ ಹೇಗಿರುತ್ತದೆ ಎಂಬ ಪಾಠವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಆತನನ್ನು ಗುಜರಾತ್‍ನಿಂದ ಕೇರಳದ ಕೊಚ್ಚಿಗೆ ಕಳುಹಿಸಿದ್ದಾನೆ.
ಅಮೇರಿಕಾದಲ್ಲಿ ಎಂಬಿಎ ಓದುತ್ತಿರುವ ದ್ರಾವ್ಯ ರಜಾ ದಿನ ಕಳೆಯಲು ಭಾರತಕ್ಕೆ ಆಗಮಿಸಿದ್ದ. ಈ ವೇಳೆ ತಂದೆ ಧೋಲಾಕಿಯ ಮಗನ ಮುಂದೆ ಒಂದು ಚಾಲೆಂಜ್ ಇಡುತ್ತಾನೆ. ಅದೇನೆಂದರೆ ನೀನು ಒಂದು ತಿಂಗಳಿನಲ್ಲಿ ನಿನ್ನ ಸ್ವಾ ಸಂಪಾದನೆಯನ್ನು ನನಗೆ ತಂದು ತೋರಿಸು ಎಂದು. ಅಷ್ಟೇ ಇಲ್ಲದೇ ಆತನಿಗೆ 3 ಷರತ್ತುಗಳನ್ನು ವಿಧಿಸಿದ್ದಾನೆ

22dholkia
1.ತಾನು ಕೆಲಸ ಮಾಡುವ ಜಾಗದಲ್ಲಿ ಎಂದೂ ತನ್ನ ತಂದೆ ಹೆಸರು ಬಳಸುವಂತಿಲ್ಲ.
2.ನೀನು ಒಂದೇ ಪ್ರದೇಶದಲ್ಲಿ ಕನಿಷ್ಠ ಅಂದರೂ ಒಂದು ವಾರ ಕೆಲಸ ಮಾಡಬೇಕು
3.ನಿನಗೆ ಕೊಡುವ ಕೇವಲ 7 ಸಾವಿರ ಹಣದಲ್ಲಿಯೇ ನಿನ್ನ ದಿನದ ಖರ್ಚುಗಳು ಭರಿಸಿಕೊಳ್ಳಬೇಕು. ಎಂದು ಷರತ್ತು ವಿಧಿಸಿದ್ದ ತಂದೆಯ ಶರತ್ತಿನಂತೆ ಕೇರಳಕ್ಕೆ ಆಗಮಿಸಿದ
ಈತನಿಗೆ ಸರಿಯಾಗಿ ಹಿಂದಿ ಮತ್ತು ಮಲಯಾಳಂ ಭಾಷೆ ಗೊತ್ತಿಲ್ಲದಿದ್ದರೂ ಕೇರಳವನ್ನು ಆಯ್ಕೆ ಮಾಡಿಕೊಂಡ ದ್ರಾವ್ಯ ಮೊದಲು ಕೆಲಸಕ್ಕೆ ಸೇರಿದ್ದು ಒಂದು ಬೇಕರಿಯಲ್ಲಿ. ಆನಂತರವಾಗಿ ಕಾಲ್‍ಸೆಂಟರ್, ಶೂ ಶಾಪ್, ಮ್ಯಾಕ್‍ಡೊನಾಲ್ಡ್ ನಲ್ಲಿ ಕೆಲಸ ಮಾಡಿದ್ದಾನೆ. ಈತನಿಗೆ ಕೊಡುತ್ತಿದ್ದ 4 ಸಾವಿರ ಹಣ ತಿಂಗಳಂತ್ಯದೊಳಗೆ ಖಾಲಿಯಾಗಿಬಿಡುತ್ತಿತ್ತು. ಪ್ರತಿನಿತ್ಯ ತಾನು ಸೇವಿಸುವ ಆಹಾರಕ್ಕೇ ರೂ 129 ತಗುಲುತ್ತಿದ್ದು ತಿಂಗಳಿನಲ್ಲಿ 250ರೂ ಅಧಿಕ ವೆಚ್ಚ ಬರುತ್ತಿತ್ತು. ಎಂದು ಹೇಳಿದ್ದಾರೆ.
ಇಂತಹ ತಂದೆ ಎಲ್ಲರಿಗೂ ಆದರ್ಶವಾಗಿರಲಿ. ಇಂದಿನ ಕಾಲದಲ್ಲಿ ತನ್ನ ಮಗನಿಗೆ ಕೋಟಿಗಟ್ಟಲೇ ಆಸ್ತಿ ಮಾಡಿ ಕಷ್ಟ ಅಂದ್ರೆ ಏನೂ ಎಂದು ಹೇಳಿ ಕೊಡದ ಈಗಿನ ಪೋಷಕರಲ್ಲೂ ಇಂತವರಿದ್ದಾರೆ ಎಂದರೆ ಅದು ಹೆಮ್ಮೆಯ ವಿಷಯ ಅಲ್ಲವೇ…

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...