ನಿಮಗೆ ಗೌರಿಗದ್ದೆ ದತ್ತಪೀಠದ ಖ್ಯಾತ ಅವಧೂತರಾಗಿರುವ ವಿನಯ್ ಗುರೂಜಿ ಅವರು ಗೊತ್ತಲ್ಲವೇ. ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು ಸೇರಿ ಅಪಾರ ಭಕ್ತರನ್ನು ಹೊಂದಿರುವ ಅವರು ಸದಾ ಒಂದಲ್ಲ ಒಂದು ರೀತಿಯ ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ವಿನಯ್ ಗುರೂಜಿ ಎಂದ ಕೂಡಲೇ ಕಣ್ಣೆದುರು ಬರುವುದು ವಿವಾದಗಳ ಹುತ್ತ..!
ಶ್ರೀ ಗುರೂಜಿಯವರ ವಿವಾದಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕುರಿತು ನೀಡಿರುವ ಅವಹೇಳನಕಾರಿ ಮಾತು.
ವಿನಯ್ ಗುರೂಜಿ ಮಾತಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಸುದೀಪ್ ಅಭಿಮಾನಿಗಳಂತೂ ಕೆಂಡಾಮಂಡಲರಾಗಿದ್ದಾರೆ. ಗುರೂಜಿ ವಿರುದ್ಧ ಕಿಡಿಕಾರಲಾರಂಭಿಸಿದ್ದಾರೆ. ಎಲ್ಲಾ ಕಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಗುರೂಜಿ ಪೈಲ್ವಾನ್ ಸಕ್ಸಸ್ ಓಟದ ಖುಷಿಯಲ್ಲಿರುವ ಸುದೀಪ್ ಬಗ್ಗೆ ಏನಂದಿದ್ದಾರೆ ಗೊತ್ತೇ?
ಸುದೀಪ್ ಸಿನಿಮಾ ನೋಡಿದರೆ ಕೈಯ ರೋಮವೆಲ್ಲಾ ಎದ್ದು ನಿಲ್ಲುತ್ತೆ ಅಂತ ಮೂವಿ ನೋಡಿದ ಹುಡುಗರ ಹೇಳುತ್ತಾರೆ. ಅವನು ಮಾಣಿಕ್ಯನಂತೆ, ಹೆಬ್ಬಲಿಯಂತೆ.. ನಿಜವಾದ ಹುಲಿ ಬಂದರೆ ಓಡಿ ಹೋಗ್ತಾನೆ ಎಂದು ಅಪಹಾಸ್ಯ ಮಾಡಿದ್ದಾರೆ ವಿನಯ್ ಗುರೂಜಿ. ಈ ಬಗ್ಗೆ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಗುರೂಜಿ ವಿರುದ್ಧ ಭಾರೀ ಟೀಕೆಗಳು ಕೇಳಿ ಬರ್ತಾ ಇವೆ.
ಅಭಿನಯ ಚಕ್ರವರ್ತಿ ಸುದೀಪ್ಗೆ ಅಪಹಾಸ್ಯ ಮಾಡಿದ ವಿನಯ್ ಗುರೂಜಿ..!
Date: