ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅವರ ಅಭಿಮಾನಿಗಳು ಡಿ ಬಾಸ್ , ಸಾರಥಿ, ಶತ ಸೋದರಾಗ್ರಜ , ಬಾಕ್ಸ್ ಆಫೀಸ್ ಸುಲ್ತಾನ್ ಎಂದೆಲ್ಲ ಭಿನ್ನ ವಿಭಿನ್ನವಾದ ಇನ್ನು ಮುಂತಾದ ಹಲವಾರು ಬಿರುದುಗಳನ್ನು ನೀಡಿದ್ದಾರೆ. ಅಭಿಮಾನಿಗಳು ಎಂದ ಮೇಲೆ ತಮಗೆ ಇಷ್ಟ ಬಂದ ಬಿರುದನ್ನು ಅವರ ನೆಚ್ಚಿನ ನಟರಿಗೆ ನೀಡುವುದು ಕಾಮನ್. ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಬಿರುದನ್ನು ತಮ್ಮ ನೆಚ್ಚಿನ ನಟ ದರ್ಶನ್ ಅವರಿಗೆ ನೀಡಿದ್ದಾರೆ. ಹೌದು “ಕರುನಾಡಿನ ಒಡೆಯ” ಎಂಬ ಬಿರುದನ್ನು ದರ್ಶನ್ ಅಭಿಮಾನಿಗಳು ಇದೀಗ ನೀಡಿದ್ದು ಮಿಶ್ರ ಪ್ರತಿಕ್ರಿಯೆಗೆ ಈ ಬಿರುದು ಒಳಗಾಗಿದೆ.
ಹೌದು ಕರುನಾಡಿನ ಒಡೆಯ ಎಂದು ಬಿರುದು ಕೊಟ್ಟಿರುವುದಕ್ಕೆ ಸಾಮಾನ್ಯ ಜನು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ. ಕರುನಾಡಿನ ಒಡೆಯ ಎಂದು ಬಿರುದು ನೀಡುವ ಅಗತ್ಯ ಏನಿದೆ ದರ್ಶನ್ ಅವರು ರಾಜ್ಯಕ್ಕೆ ಒಡೆಯನಾ? ನಮ್ಮ ರಾಜ್ಯಕ್ಕೆ ಒಡೆಯನ ಸ್ಥಾನದಲ್ಲಿ ನಿಂತು ಏನಾದರೂ ಮಾಡಿದ್ದಾರಾ? ಅವರ ಮುಂದಿನ ಚಿತ್ರಕ್ಕೆ ಒಡೆಯ ಎಂದು ಹೆಸರಿದೆ ಎಂಬ ಕಾರಣಕ್ಕೆ ಕರುನಾಡಿನ ಒಡೆಯ ಎಂದು ಬಿರುದು ನೀಡುವುದು ಎಷ್ಟು ಸರಿ ಎಂದು ಟೀಕೆ ಮಾಡುತ್ತಿದ್ದಾರೆ.