ಅಭಿಮಾನಿಗಳಿಗೆ ಕಿಚ್ಚನ ಸರ್ಪ್ರೈಸ್ ಗಿಫ್ಟ್.. ಕೋಟಿಗೊಬ್ಬ 3 ಪೋಸ್ಟರ್ ರಿಲೀಸ್..

Date:

ಕಿಚ್ಚನ ಸಿನಿಮಾಗಳು ಅಂದರೆ ಅಭಿಮಾನಿಗಳಿಗೆ ಸಖತ್ ಕ್ರೇಜ್.. ಅದರಲ್ಲೂ ಕೋಟಿಗೊಬ್ಬ -೨ ಚಿತ್ರದಲ್ಲಿ ಅಭಿನಯ ಚಕ್ರವರ್ತಿಯ ಅಭಿನಯಕ್ಕೆ ಜನ ಫಿದಾ ಆಗಿದ್ದರು. ಭರ್ಜರಿ ಯಶಸ್ಸು ಗಳಿಸಿತ್ತು ಕೋಟಿಗೊಬ್ಬ-೨.. ಇದೀಗ ಕಿಚ್ಚ ಅಭಿನಯದ ಕೋಟಿಗೊಬ್ಬ-೩ ಸಿನಿಮಾ ಮತ್ತೆ ಸೆನ್ಶೇಷನ್ ಕ್ರಿಯೇಟ್ ಮಾಡಿದೆ.

ಕೋಟಿಗೊಬ್ಬ-೩ ಚಿತ್ರದ ಟೀಸರ್ ಬಿಡುಗಡೆಯಾಗಿ ಈಗಾಗ್ಲೇ ಸಾಮಾಜಿಕ ಜಾಲತಾಣದಲ್ಲಿ ಅಧಿಕ ವೀವ್ಸ್ ಪಡೆಯೋ ಮೂಲಕ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದ ಟೀಸರ್ ಮಿಲಿಯನ್‌ಗಟ್ಟಲೆ ವೀವ್ಸ್ ಪಡಿಯೋ ಮೂಲಕ ಸೆನ್ಶೇಷನ್ ಕ್ರಿಯೇಟ್ ಮಾಡಿತ್ತು. ಕ್ರಿಯೇಟ್ ಮಾಡಿದ್ರೆ, ತದನಂತರ ಬಂದ ಚಿತ್ರದ ಮೋಷನ್ ಪೋಸ್ಟರ್ ಕೂಡಾ ಭರ್ಜರಿ ಹವಾ ಮಾಡಿತ್ತು.

ಆದರೆ ಮತ್ತೆ ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲದೇ ಅಭಿಮಾನಿಗಳು ಬೇಸರಗೊಂಡಿದ್ದರು. ಜೊತೆಗೆ ಸಾಮಾಜಿಕ ‌ಜಾಲತಾಣಗಳಲ್ಲಿ ಕೊಂಚ ಆಕ್ರೋಶವನ್ನು ತೋರ್ಪಡಿಸಿದ್ದರು.. ಇದೀಗ ಸಡನ್ ಆಗಿ ಕಿಚ್ಚ ತಮ್ಮ ಅಭಿಮಾನಿಗಳಿಗೆ ಸರ್ಪೈಸ್ ಗಿಫ್ಟ್ ನೀಡಿದ್ದಾರೆ.‌ ಕೋಟಿಗೊಬ್ಬ ೩ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ, ಅಭಿಮಾನಿಗಳ ಸಂತಸಪಡಿಸಿದ್ದಾರೆ.

ಎಸ್.. ಇದೀಗ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಸೌಂಡ್ ಮಾಡುತ್ತಿದೆ. ಇಂದು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹುಟ್ಟಿದ ಹಬ್ಬ.‌ ಹೀಗಾಗಿ ಜನ್ಮದಿನದಂದು ಅವರಿಗೆ ಶುಭಾಶಯ ಕೋರುವ ಮೂಲಕ ಸುದೀಪ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಕಿಚ್ಚನ ಈ ಪೋಸ್ಟರ್ ಗಿಫ್ಟ್ ಗೆ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ.

ಚಿತ್ರದ ಆಕ್ಷನ್ ಸನ್ನಿವೇಶವೊಂದರ ಪೋಸ್ಟರ್ ಬಿಡುಗಡೆ ಮಾಡಿದೆ. ಕಟ್ಡವೊಂದರಲ್ಲಿ ನಡೆಯುವ ಫೈಟಿಂಗ್ ಸೀನ್ ನ ಈ ಪೋಸ್ಟರ್ ನೋಡಿದ ಅಭಿಮಾನಿಗಳು ರೋಮಾಂಚಿತರಾಗುತ್ತಿದ್ದಾರೆ.

ಸೂರಪ್ಪ ಬಾಬು ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಸುದೀಪ್, ಸಂತೋಷ ಮತ್ತು ಆರೋಗ್ಯ ಸದಾ ಇರಲಿ ಎಂದು ಹಾರೈಸಿದ್ದಾರೆ. ‘ಕೋಟಿಗೊಬ್ಬ 3’ ಚಿತ್ರತಂಡ ಹಾಗೂ ಸುದೀಪ್ ಅಭಿಮಾನಿಗಳು ಸಹ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಕೋಟಿಗೊಬ್ಬ ಚಿತ್ರ ಸರಣಿಯ ಮೂರನೇ ಭಾಗ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ‘ಪ್ರೇಮಮ್’ ಖ್ಯಾತಿಯ ಮಡೋನ್ನಾ ಸೆಬಾಸ್ಟಿಯನ್ ಸುದೀಪ್‌ಗೆ ಜೊತೆಗೆ ನಟಿಸಿದ್ದಾರೆ. ಬಾಲಿವುಡ್‌ನ ನಟರಾದ ಅಫ್ತಾಬ್ ಶಿವ್‌ದಾಸಾನಿ, ಶ್ರದ್ಧಾ ದಾಸ್ ಮತ್ತು ನವಾಬ್ ಶಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್ ಈ ಸಿನಿಮಾ ನಿರ್ದೇಶಿಸೊದ್ದು, ಯುರೋಪ್ ಮತ್ತು ಭಾರತದಲ್ಲಿ ಚಿತ್ರೀಕರಿಸಲಾಗಿದೆ.

ಫ್ಯಾಂಟಮ್ ಚಿತ್ರೀಕರಣ ಚಿತ್ರಕ್ಕೆ ಸಂಬಂಧಿಸಿದ ಕೆಲವು ಕೆಲಸಗಳು ಬಾಕಿ ಉಳಿದಿದೆ. ಹೀಗಾಗಿ ಯಾವುದೇ ಅಪ್‌ಡೇಟ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸುದೀಪ್ ಇತ್ತೀಚೆಗೆ ತಿಳಿಸಿದ್ದರು. ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಈ ಚಿತ್ರ ತೆರೆಕಾಣಲಿದೆ ಎಂದು ಹೇಳಲಾಗಿದೆ. ಸದ್ಯ ಸುದೀಪ್ ಈಗ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದು, ಬಾಕಿಯಿರೋ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿ ಸಿನಿಮಾವನ್ನ ತೆರೆಗೆ ತರೋ ಪ್ಲಾನ್ ಮಾಡಿದೆ ಚಿತ್ರತಂಡ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...