ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಅವರನ್ನು ನೋಡಲು ನಂದಿ ಲಿಂಕ್ ಗ್ರಾಂಡ್ ಗೆ ಜನ ಸಾಗರವೇ ಹರಿದು ಬಂದಿತ್ತು ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿತ್ತು ಹಾಗು ಬೆಳಿಗ್ಗೆಯು ಸಹ ಅಭಿಮಾನಿಗಳನ್ನು ಬೇಟಿ ಮಾಡಿದ ಯಶ್ ಇದೆ ದಿನ ‘ಕೆಜಿಎಫ್ ಚಾಪ್ಟರ್ 2’ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತಾದರೂ ಕಾರಣಾಂತರದಿಂದ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಆದರೆ, ‘ಕೆಜಿಎಫ್ ಚಾಪ್ಟರ್ 2’ ಹೇಳುವ ಮೂಲಕ ಯಶ್ ಅಭಿಮಾನಿಗಳಿಗೆ ಬಹು ದೊಡ್ಡ ಉಡುಗೊರೆ ನೀಡಿದ್ದಾರೆ.
ನಾಯಂಡಹಳ್ಳಿ ಸಿಗ್ನಲ್ ಸಮೀಪದ ನಂದಿ ಲಿಂಕ್ ಗ್ರೌಂಡ್ ನಲ್ಲಿ ಬರ್ತಡೇಗೆ 5000 ಕೆಜಿ ಕೇಕ್ ತಯಾರು ಮಾಡಲಾಗಿದ್ದು, ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.