ಅಮಿತ್ ಶಾ ಎಲ್ಲೂ ಕೂಡಾ ಅಂಬೇಡ್ಕರ್ʼಗೆ ಅಪಮಾನ ಮಾಡಿಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಅಮಿತ್ ಶಾ ಎಲ್ಲೂ ಕೂಡಾ ಅಂಬೇಡ್ಕರ್ʼಗೆ ಅಪಮಾನ ಮಾಡಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಂಬೇಡ್ಕರ್‌ಗೆ ಗೌರವ ಕೊಡೋ ಕೆಲಸ ಮಾಡಿಲ್ಲ. ಜಗಜೀವನರಾಮ್ ಸೇರಿ ಎಲ್ಲಾ ನಾಯಕರಿಗೆ ಅಪಮಾನ ಮಾಡಿದ್ದಾರೆ.
ಕೆಲವು ದಲಿತ ಸಂಘಟನೆಗಳು ಅಮಿತ್ ಶಾ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಅಮಿತ್ ಶಾ ಎಲ್ಲೂ ಕೂಡಾ ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ಅಪಮಾನ ಮಾಡಿದ್ದು ಕಾಂಗ್ರೆಸ್, ಇದನ್ನ ಅಮಿತ್ ಶಾ ಹೇಳಿದ್ದಕ್ಕೆ ಅವರ ವಿರುದ್ಧ ಹೇಳಿಕೆ ತಿರುಚಿ ಆರೋಪ ಮಾಡ್ತಿದ್ದಾರೆ. ಹೀಗಿದ್ದರೂ ಯಾಕೆ ನಮ್ಮ ಬಂಧುಗಳು ಪ್ರತಿಭಟನೆ ಮಾಡ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.