ಅಮೆಜಾನ್‌ನಲ್ಲಿ 55,000 ಹುದ್ದೆಗಳು

Date:

ಅಮೆಜಾನ್​​.ಕಾಂ ಅಂತಾರಾಷ್ಟ್ರೀಯ ಕಂಪನಿಯು ಜಾಗತಿಕ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡುತ್ತಿದೆ. ಸೆಪ್ಟೆಂಬರ್ 15ರಿಂದ ವಿಶ್ವದೆಲ್ಲೆಡೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಂಡಿ ಜಸ್ಸಿ ಹೇಳಿದ್ದಾರೆ. ರೀಟೇಲ್ ಹಾಗೂ ಕ್ಲೌಡ್, ಜಾಹೀರಾತು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಬೇಡಿಕೆ ಹೆಚ್ಚಾಗಿದೆ. ಸಂಸ್ಥೆ ಆರಂಭಿಸಲಿರುವ ಪ್ರಾಜೆಕ್ಟ್​ ಕ್ಯುಪಿರ್​ ಜಾರಿಗೊಳಿಸಲು ಹೊಸ ನೇಮಕಾತಿ ಆರಂಭ ಅಗತ್ಯವಿದೆ. ಉಪಗ್ರಹ ಆಧಾರಿತವಾಗಿ ಬ್ರಾಡ್​​ಬ್ಯಾಂಡ್​​ ವಿಸ್ತರಣೆಗೆ ಅಮೆಜಾನ್ ಮುಂದಾಗಿದೆ.

ಜಾಗತಿಕವಾಗಿ 275,000 ಮಂದಿ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ಈಗ ಕೆರಿಯರ್​ ಡೇ ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್​ ಮತ್ತು ಕಾರ್ಪೊರೇಟ್​​ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ. ಈ ಪೈಕಿ 40,000 ಮಂದಿ ಸಿಬ್ಬಂದಿ ಅಮೆರಿಕದಲ್ಲಿ ನೇಮಕವಾಗಲಿದ್ದು, ಮಿಕ್ಕಂತೆ ಭಾರತ, ಜರ್ಮನಿ ಮತ್ತು ಜಪಾನ್​ ದೇಶಗಳಿಂದ ಉಳಿದವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಜಸ್ಸಿ ಹೇಳಿದರು.

 

ಕೋವಿಡ್ ಸಂದರ್ಭದಲ್ಲಿ ನೇಮಕಾತಿ;
ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 22 ಸಾವಿರ ಮಂದಿಯನ್ನು ಭಾರತದಿಂದ ನೇಮಕ ಮಾಡಿಕೊಳ್ಳಲಾಗಿದೆ. ಭಾರತದ ವಿವಿಧ ಭಾಷೆ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿನ ಗ್ರಾಹಕರಿಗೆ ನೆರವಾಗಲು ತಾತ್ಕಾಲಿಕವಾಗಿ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು.

ಹೈದರಾಬಾದ್, ಪುಣೆ, ಕೊಯಮತ್ತೂರು, ನೋಯ್ಡಾ, ಕೋಲ್ಕತ್ತಾ, ಜೈಪುರ, ಚಂಡೀಗಢ್, ಮಂಗಳೂರು, ಇಂಧೋರ್, ಭೋಪಾಲ್ ಮತ್ತು ಲಕ್ನೋದಲ್ಲಿ ಈಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅಮೆಜಾನ್‌ ತನ್ನ ವರ್ಚುವಲ್ ಕಸ್ಟಮರ್ ಸರ್ವೀಸ್ ಯೋಜನೆಯಡಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಯೋಜನೆಯಡಿ ಕೆಲಸ ಪಡೆದವರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

ಅಸೋಸಿಯೇಟ್ ಕಸ್ಟಮರ್ ಸರ್ವೀಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಗ್ರಾಹಕರ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇ-ಮೇಲ್, ಚಾಟ್, ಸಾಮಾಜಿಕ ಜಾಲತಾಣ, ಫೋನ್ ಮೂಲಕ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ.

ಅಮೆಜಾನ್.ಇನ್ 15 ರಾಜ್ಯಗಳಲ್ಲಿ 60 ಕ್ಕೂ ಹೆಚ್ಚು ಗೋದಾಮುಗಳು ಅಥವಾ ಈಡೇರಿಕೆ ಕೇಂದ್ರಗಳನ್ನು ಹೊಂದಿದೆ. ಈಗ ಇಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಅಖಿಲ್ ಸಕ್ಸೇನಾ,ಉಪಾಧ್ಯಕ್ಷ,ಗ್ರಾಹಕ ಪೂರೈಸುವ ಕಾರ್ಯಾಚರಣೆ, ಎಪಿಎಸಿ, ಅಮೆಜಾನ್ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದಲ್ಲಿ ಗರಿಷ್ಠವಾಗಿ ನೇಮಕ ಮಾಡಿಕೊಂಡಿರುವ ಖಾಸಗಿ ಸಂಸ್ಥೆಗಳ ಪೈಕಿ ಅಮೆಜಾನ್ ಎರಡನೆಯ ಸ್ಥಾನದಲ್ಲಿದೆ. ಈ ಹೊಸ ನೇಮಕಾತಿ ಮೂಲಕ ಉದ್ಯೋಗಿಗಳ ಸಂಖ್ಯೆಯಲ್ಲಿ ಫೇಸ್ಬುಕ್ ಹಾಗೂ ಗೂಗಲ್ ಜೊತೆ ಸ್ಪರ್ಧೆಗಿಳಿಯಲಿದೆ.

 

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...