ಯುವರತ್ನ ಕಳೆದ ವಾರವಷ್ಟೇ ತೆರೆಕಂಡು ಫ್ಯಾಮಿಲಿ ಆಡಿಯನ್ಸ್ ಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಯನ್ನು ಪಡೆದುಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ. ಕೊರೊನಾ ಎರಡನೇ ಹಳೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಬೇಕಾದ್ದರಿಂದ ಮತ್ತು 50% ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರಕ್ಕೆ ಪ್ರವೇಶ ಮಾಡಲು ಅನುಮತಿ ನೀಡಿರುವುದರಿಂದ ಕೇವಲ ಎಂಟೇ ದಿನಕ್ಕೆ ಯುವರತ್ನ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ನಿನ್ನೆ ಮಧ್ಯರಾತ್ರಿ ಎಷ್ಟೇ ಬಿಡುಗಡೆ ಮಾಡಲಾಯಿತು.
ಒಂದೊಳ್ಳೆ ಚಿತ್ರವನ್ನು ಅಮೆಜಾನ್ ಪ್ರೈಮ್ ಗೆ ಸೇಲ್ ಮಾಡಲಿ ಅಥವಾ ಅದು ಪೈರಸಿಯಾಗಿ ಎಲ್ಲರ ಮೊಬೈಲ್ ಗಳಲ್ಲಿ ಹರಿದಾಡಿದರೂ ಸಹ ಅದು ಗೆದ್ದೇ ಗೆಲ್ಲುತ್ತದೆ ಎಂಬುದಕ್ಕೆ ಯುವರತ್ನ ಚಿತ್ರವೇ ಸಾಕ್ಷಿ. ನಿನ್ನೆಯಷ್ಟೆ ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಬಂದರೂ ಸಹ ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಯುವರತ್ನ ಚಿತ್ರದ ತುಂಬು ಮಂದಿರಗಳ ಪ್ರದರ್ಶನವನ್ನು ಕಂಡಿದೆ. ಹೌದು ಯುವರತ್ನ ಚಿತ್ರ ಬೆಂಗಳೂರಿನ ಹಲವಾರು ಚಿತ್ರಮಂದಿರಗಳು , ಹುಬ್ಬಳ್ಳಿ ಮತ್ತು ಶಿವಮೊಗ್ಗ ನಗರಗಳಲ್ಲಿ ಯುವರತ್ನ ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ.
ಅಮೆಜಾನ್ ಪ್ರೈಮ್ ಗೆ ಚಿತ್ರ ಬಂದನಂತರ ಚಿತ್ರಮಂದಿರದಲ್ಲಿ ಯಾರೂ ವೀಕ್ಷಿಸುವುದಿಲ್ಲ ಎಂಬ ಮಾತನ್ನು ಯುವರತ್ನ ಹುಸಿಗೊಳಿಸಿದ್ದು ಕುಟುಂಬ ಸಮೇತರಾಗಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವವರ ಸಂಖ್ಯೆ ಈಗಲೂ ಅಷ್ಟೇ ಇದೆ.