ಸುಷ್ಮಾ ಸ್ವರಾಜ್ ಅಗಲಿಕೆ ಸುದ್ದಿ ತಿಳಿದ ಸದಾನಂದ ಗೌಡ್ರು ಬೇಸರದ ಮಾತುಗಳನ್ನು ವ್ಯಕ್ತಪಡಿಸಿದರು ಸುಷ್ಮಾ ಸ್ವರಾಜ್ ಅವರು ನಮ್ಮ ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿ ಅವರ ಹೆಸರು ಎಂದಿಗು ಅಗ್ರ ಸ್ಥಾನದಲ್ಲಿರುತ್ತದೆ ಅವರ ಮಾತು ವಿಚಾರ ವಿಮರ್ಶೆ. ಬುದ್ದಿವಂತಿಕೆ. ದೈವ ಭಕ್ತಿ . ಸರಳ ಜೀವನ. ಎಲ್ಲವೂ ಅನುಕರಣೀಯ. ರಾಜಕೀಯದಲ್ಲಿ ಅನೇಕ ಸ್ಥಾನ ಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಎಂದಿಗು ಜೀವಂತ.
ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಹತ್ತೊರದಿಂದ ನಾನು ಅವರನ್ನು ನೊಡಿದ್ದೆನೆ , ಅವರು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ . ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ,ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನ ಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಕಿ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ ಮಾತೃ ಹೃದಯ, ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ.
ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ, ತಮ್ಮ ಚಿಕ್ಕ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ, BJP ಮಹಿಳಾ ವಕ್ತಾರರಾಗಿ,ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು.
ಹಾಗೆ ಈಗ ಮತ್ತೊಮ್ಮೆ ಅನಂತ್ ಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು . ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು.
ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿ , ಅಮ್ಮ ಇದೇ ನನ್ನ ನಮನ ಎಂದು ಡಿವಿ ಸದಾನಂದ ಗೌಡ್ರು ಸುಷ್ಮಾ ಸ್ವರಾಜ್ ಅಗಲಿಕೆಯಿಂದ ನೋವಿನ ಮಾತನ್ನು ವ್ಯಕ್ತಪಡಿಸಿದರು .