ಅಯೋಧ್ಯಾ ವಿವಾದವನ್ನ ಕೇವಲ 24 ಗಂಟೆಯಲ್ಲಿ ಬಗೆಹರಿಸುತ್ತೇವೆ : ಯೋಗಿ ಆದಿತ್ಯನಾಥ್..!!
ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರ ಸುಪ್ರೀಂಕೋರ್ಟ್ ನಲ್ಲಿದ್ದು, ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ವಿವಾದವನ್ನು ನಮಗೆ ಹಸ್ಯಾಂತರಿಸಿದರೆ ನಾವು ಅದನ್ನ ಕೇವಲ 24 ಗಂಟೆಯಲ್ಲೇ ಬಗೆಹರಿಸುತ್ತೇವೆ ಎಂದಿದ್ದಾರೆ..
ಅಯೋಧ್ಯೆ ವಿವಾದದವನ್ನ ಮಾತುಕತೆ ಮೂಲಕ ನೀವು ಬಗೆಹರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್ ಅವರು, ಕೋರ್ಟ್ ಆದಷ್ಟು ಬೇಗ ತೀರ್ಪು ನೀಡುವಂತೆ ಮನವಿ ಮಾಡಿದ್ದಾರೆ.. ಬೇಗ ತೀರ್ಪು ನೀಡಲು ಸಾಧ್ಯವಾಗಿದ್ದರೆ ವಿವಾದವನ್ನ ನಮಗೆ ಒಪ್ಪಿಸಿ, ನಾವು 24 ಗಂಟೆಯಲ್ಲಿ ಇತ್ಯಾರ್ಥಪಡಿಸುತ್ತೇವೆ ಎಂದು ಹೇಳಿದ್ದಾರೆ…