ಅರ್ಚಕರ ಮೇಲಿನ ದ್ವೇಷಕ್ಕೆ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಹೆಸರುಘಟ್ಟದ ಹನಿಯೂರು ಗ್ರಾಮದ ಹೊರ ವಲಯದಲ್ಲಿನ ಓಂಕಾರ್ ಮಹದೇವಿ ಆಶ್ರಮದಲ್ಲಿ ಘಟನೆ ನಡೆದಿದೆ.
ಆಶ್ರಮದ ಪೂಜಾರಿಕೆ ಮಾಡುತ್ತಿದ್ದ ಅವಲಪ್ಪಾಚಾರ್ ಅವರ ಮನೆ ಮುಂದೆ ತಮ್ಮ ಇನೋವಾ ಕಾರನ್ನು ನಿಲ್ಲಿಸಿದ್ದರು. ದುಷ್ಕರ್ಮಿಗಳು ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಇವರ ಮನೆ ಬಳಿ ಬಂದು ಹೊರಗಿನಿಂದ ಬಾಗಿಲಿನ ಚಿಲಕ ಹಾಕಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.