ಕೊರೊನಾ ವೈರಸ್ ದೇಶದಾದ್ಯಂತ ತನ್ನ ರೌದ್ರ ನರ್ತನವನ್ನು ಮುಂದುವರೆಸಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕೊರಳ ಸೋಂಕಿತರ ಸಂಖ್ಯೆ ಏರುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತಲೆ ಎತ್ತಿದೆ. ನಿನ್ನೆ ರಾತ್ರಿಯಷ್ಟೇ ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದ ಕೋವಿಂದ್ ಸೆಂಟರ್ ನಲ್ಲಿ 24ಜನ ಸಾವನ್ನಪ್ಪಿದ್ದಾರೆ.
ಹೀಗೆ ರಾಜ್ಯದಲ್ಲಿ ಸಾಲು ಸಾಲು ಕೊರೊನಾ ಸೋಂಕಿತರ ಸಾವುಗಳು ಸಂಭವಿಸುತ್ತಿದ್ದು, ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಕೊರೊನಾ ಸೋಂಕಿಗೆ ಈಗಾಗಲೇ ಬಲಿಯಾಗಿದ್ದಾರೆ. ಇದೀಗ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮನೆಯಲ್ಲಿಯೂ ಕೊರೊನಾ ಸೋಂಕಿಗೆ ಸದಸ್ಯರೊಬ್ಬರು ಬಲಿಯಾಗಿದ್ದಾರೆ. ಅರ್ಜುನ್ ಜನ್ಯ ಅವರ ಅಣ್ಣ ಕಿರಣ್ ಜನ್ಯ ಕರೋನಾ ಸೊಂಕಿನಿಂದ ಅಸುನೀಗಿದ್ದಾರೆ.
ಅಣ್ಣನನ್ನು ಕಳೆದುಕೊಂಡ ಅರ್ಜುನ್ ಜನ್ಯಾ ತೀವ್ರ ದುಃಖಕ್ಕೊಳಗಾಗಿದ್ದಾರೆ. ಎಷ್ಟೇ ಶ್ರೀಮಂತರಾಗಿದ್ದರೂ ಸಹ ಕೊರೊನಾ ಸೋಂಕು ಒಮ್ಮೆ ವಕ್ಕರಿಸಿದರೆ ಮುಗಿಯಿತು ಅದರಿಂದ ಗೆದ್ದು ಬರುವುದು ಸುಲಭದ ಮಾತಲ್ಲ. ಹೀಗಾಗಿ ದಯವಿಟ್ಟು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಮ್ಮ ಜೀವವನ್ನು ನೀವು ರಕ್ಷಿಸಿಕೊಳ್ಳಿ.