ಆತನ ಹೆಸರು ಮಂಜು…ಆಕೆಯ ಹೆಸರು ಅರ್ಚನಾ ರಾಣಿ… ಊರು ಮಂಡ್ಯ ಜಿಲ್ಲೆಯ ಕೊಪ್ಪಲು. ವರಸೆಯಲ್ಲಿ ಇವರಿಬ್ಬರು ಅಣ್ಣತಂಗಿ. ಆದರೆ, ಗೊತ್ತೋ ಗೊತ್ತಿಲ್ಲದೆ ಪ್ರೀತಿಸಿದರು.. ಅಲ್ಲಿಂದ ಶುರುವಾಗಿದ್ದೇ ನರಕ ಜೀವನ..! ಪ್ರೀತಿಯ ಖುಷಿಗಿಂತಾ ತಿಂದ ನೋವೇ ಹೆಚ್ಚು. ಕೊನೆಗೆ ಈ ಪ್ರೇಮ ಕಹಾನಿ ಕೊಲೆಯಲ್ಲಿ ಅಂತ್ಯವಾಗಿದೆ.
ವರಸೆಯಲ್ಲಿ ಅಣ್ಣ -ತಂಗಿಯಾಗಿರುವ ಮಂಜು- ಅರ್ಚನಾರ ಪ್ರೀತಿಗೆ ಕುಟುಂಬದ ಒಪ್ಪಿಗೆ ಇರಲಿಲ್ಲ. ಅರ್ಚನಾ ತಂದೆ ದೇವರಾಜ್ ಕೆಂಡಮಂಡಲಾರಿಬಿಟ್ಟಿದ್ದರು. ಏಳು ವರ್ಷ ಪ್ರೀತಿಸಿ ಕೊನೆಗೆ ಸೆಪ್ಟೆಂಬರ್ 16ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮದುವೆಯಾಗಿ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದರು, ಹೀಗೆ ಹೊಸ ಬದುಕು ಕಟ್ಟಿಕೊಂಡಿದ್ದ ನವಜೋಡಿಗೆ ನೆಮ್ಮದಿ ಸಿಗಲಿಲ್ಲ. ಆಸ್ತಿಯನ್ನು ಬರೆಸಿಕೊಂಡು ದೂರ ಬಿಟ್ಟರೂ ತೃಪ್ತನಾಗದ ದೇವರಾಜ್, ಮಂಜು ಕೊಲೆಗೆ ಮುಂದಾಗಿಯೇ ಬಿಟ್ಟ. ಜಿಮ್ ನಡೆಸುತ್ತಿರುವ ತನ್ನ ತಮ್ಮನ ಮಗ ಸಂಜು ಮೂಲಕ ಮಂಜು ಕೊಲೆಗೆ ಸುಪಾರಿ ಕೊಟ್ಟ!
ಸಂಜು ಯೋಗೇಶ್, ಮಂಜು, ಚಲುವ ಮತ್ತು ನಂದನ್ ಎಂಬುವವರ ಜೊತೆ ಸೇರಿ ಮಂಜುವನ್ನು ಕೊಲೆಗೈದು. ನೀರಿಗೆ ಎಸೆದ! ದೇಹ ತೇಲಬಾರದೆಂದು ಕಲ್ಲುಕಟ್ಟಿ ಎಸೆದಿದ್ದರು. ಪತಿ ಮನೆಗೆ ಬರಲಿಲ್ಲ ಎಂದು ಅರ್ಚನಾ ಕಂಪ್ಲೇಂಟ್ ಕೊಟ್ಟಿದ್ದಳು. ನವೆಂಬರ್ 15ರಂದು ಹಾಸನ ಜಿಲ್ಲೆಯ ಹೊಳೇನರಸೀಪುರದ ಬಳಿ ಹೇಮಾವತಿ ನದಿಯಲ್ಲಿ ಮಂಜು ಶವ ಪತ್ತೆಯಾಗಿತ್ತು. ಮಂಜು ಕೈಯಲ್ಲಿದ್ದ ಟ್ಯಾಟೋನೋಡಿ ಅರ್ಚನಾ ಈತ ತನ್ನ ಪತಿ ಮಂಜನೇ ಎಂದು ಗುರುತಿಸಿದ್ದಾಳೆ. ಮಂಜನ ಮನೆಯವರು ಅರ್ಚನಾ ಕುಟುಂಬದವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಕೊನೆಗೆ ಅವರ ಅನುಮಾನ ಸತ್ಯವಾಗಿದೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಸೆಪೆತ್ ನೇತೃತ್ವ ತಂಡ ಪ್ರಕರಣ ಬೇಧಿಸಿ ಅರ್ಚನಾ ತಂದೆ ದೇವರಾಜ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಸೆಪೆತ್ ನೇತೃತ್ವ ತಂಡ ಬಂಧಿಸಿದೆ.
‘ಅವರಿಬ್ಬರು ಅಣ್ಣ-ತಂಗಿ; ಮದ್ವೆಯಾದ್ರು ; ಅವಳ ಅಪ್ಪ ಕೊಲೆ ಮಾಡಿಸಿದ!
Date: