ಅವಳು ಒಬ್ಬ ಹುಡುಗನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ, ಅವರ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಮನೆಯವರ ಕಾಟಾಚಾರಕ್ಕೆ ಯಾರನ್ನೋ ಕಟ್ಟಿಕೊಂಡಳು. ಆದರೆ ಅವಳ ಮನಸ್ಸಲ್ಲಿ ಆ ಪ್ರಿಯತಮನೇ ನೆಲೆಸಿದ್ದ. ಅವಳ ಆ ಪ್ರೀತಿ ಗುಟ್ಟು ಪತಿಗೆ ಗೊತ್ತಾಯಿತು. ಅದು ಗೊತ್ತಾಗುತ್ತಿದ್ದಂತೆ ಆತ ಅವಳ ಪ್ರೀತಿಗೆ ನೀರೆರೆಯಲು ಶುರುಮಾಡಿದ,..ವಿಚ್ಚೇದನ ನೀಡಿ ಅವಳ ಪ್ರಿಯತಮನ ಮನೆಗೆ ಆ ಪತಿ ಪುಣ್ಯಾತ್ಮನೇ ಬಿಟ್ಟು ಬಂದ. ಆದರೆ ಆ ಪ್ರಿಯಕರ ಮತ್ತೊಂದು ಮದುವೆಗೆ ರೆಡಿಯಾಗಿದ್ದಾನೆ!
ಇದು ಯಾವುದೋ ಸಿನಿಮಾ ಸ್ಟೋರಿಯಲ್ಲ. ಕೊಪ್ಪಳದಲ್ಲಿ ನಡೆದಿರುವ ಲವ್ ಸ್ಟೋರಿ.
ಆಕೆಯ ಹೆಸರು ಬಸಮ್ಮ ಎಂದು. ಆಕೆ ವಿನಯ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದಳು. ವಿನಯ್ ಮತ್ತು ಬಸಮ್ಮನ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡಿರಲಿಲ್ಲ. ಬಸಮ್ಮಗೆ ರವಿ ಎನ್ನುವ ಹುಡುಗನ ಜೊತೆ ಮದುವೆ ಮಾಡಿದ್ದರು. ಒಂದು ವರ್ಷದ ಹಿಂದೆ ರವಿ ಬಸಮ್ಮರ ವಿವಾಹ ನೆರವೇರಿತ್ತು. ವಿವಾಹ ಆದ ಮೇಲೂ ಬಸಮ್ಮ ವಿನಯ್ ನೆನಪಲ್ಲೇ ಕಾಲ ಕಳೆಯುತ್ತಿದ್ದಾಳೆ. ಆಕೆ ಹೇಳುವಂತೆ ವಿನಯ್ ಜೊತೆ ಫೋನು, ಮೆಸೇಜ್ ಎಂದು ಸಂಪರ್ಕವೂ ಇತ್ತಂತೆ.
ಮದುವೆ ಆಗಿ ಒಂದು ವರ್ಷ ಆಗಿದೆಯಷ್ಟೇ. ರವಿ ಬಸಮ್ಮಗೆ ವಿಚ್ಛೇದನ ನೀಡಿ..ಆಕೆಯ ಲವ್ವರ್ ವಿನಯ್ ಮನೆ ಬಳಿ ಹೋಗಿ ಬಿಟ್ಟು ಬಂದಿದ್ದಾನೆ. ಆದರೆ, ವಿನಯ್ ಬೇರೆ ಮದುವೆಗೆ ರೆಡಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ನನ್ನ ಮದುವೆ ಎಂದು ಹೇಳುತ್ತಿದ್ದಾರೆ. ಬಸಮ್ಮಳ ಕಾಟಕ್ಕೆ ಬೇಸತ್ತು ಮನೆಯನ್ನೇ ತೊರೆದು ಬಿಟ್ಟಿದ್ದಾರೆ. ಆದರೆ ಬಸಮ್ಮ ವಿನಯನೇ ಬೇಕು ಎಂದು ಹಠ ಹಿಡಿದು ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾಳೆ.
ಅವಳ ಜೊತೆ ಹಿಂದೆ ಪ್ರೀತಿ ಇತ್ತು. ಈಗ ಯಾವ ಪ್ರೀತಿಯೂ ಇಲ್ಲ. ಅವಳ ಮದುವೆ ಆದ ಮೇಲೆ ನಾನು ಸಂಪರ್ಕದಲ್ಲೇ ಇಲ್ಲ. ಅವಳು ಹೇಳುವುದೆಲ್ಲಾ ಸುಳ್ಳು ಎನ್ನುತ್ತಿದ್ದಾರೆ. ಆದರೆ ಬಸಮ್ಮ ಮಾತ್ರ ವಿನಯ್ ಬೇಕೇ ಬೇಕು ಎನ್ನುತ್ತಿದ್ದಾಳೆ.
ಅವರಿಬ್ಬರ ಪ್ರೀತಿಗೆ ಪತಿಯೇ ದೇವರಾದ..! ಆದರೆ ಕಥೆಯೇ ಬೇರೆ.!
Date: