ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಎರಡೂ ಕುಟುಂಬದ ವಿರೋಧ ಕಟ್ಟಿಕೊಂಡು ಹೊಸ ಜೀವನ ಆರಂಭಿಸಿದ ಅವರ ನಡುವೆ ಅದ್ಯಾವ ವಿಷಯಕ್ಕೆ ಜಗಳವಾಯಿತೋ ಆಕೆಯ ಕೊಲೆಯಲ್ಲಿ ಪ್ರೀತಿ, ಜಗಳ ಎಲ್ಲವೂ ಅಂತ್ಯವಾಯಿತು.
ಹೌದು ಪತಿಯೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಹರಿಹರ ತಾಲ್ಲೂಕಿನ ಹಿಂಡಸಗಟ್ಟ ಗ್ರಾಮದಲ್ಲಿ ನಡೆದಿದೆ.
ರಂಜಿತಾ (೨೧) ಮೃತ ದುರ್ದೈವಿ. ನಾಗರಾಜ್ ನಾಯ್ಕ್ ಆರೋಪಿ. ಹೂದೋಟಕ್ಕೆ ಹೋಗಿದ್ದಾಗ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ಆ ಜಗಳ ವಿಕೋಪಕ್ಕೆ ತಿರುಗಿ ನಾಗರಾಜ್ ರಂಜಿತಾಳ ಕತ್ತು ಹಿಸುಕಿ ನಾಗರಾಜ್ ಹತ್ಯೆಗೈದಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಇವರಿಬ್ಬರು ಪೋಷಕರ ವಿರೋಧದ ನಡುವೆ ವಿವಾಹವಾಗಿ, ಸ್ವಗ್ರಾಮದಲ್ಲಿ ವಾಸವಿದ್ದರು. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗರಾಜ್ನನ್ನು ಬಂಧಿಸಲಾಗಿದೆ.
ಅವಳನ್ನು ಪ್ರೀತಿಸಿ ಮದುವೆಯಾದ ಅವನೇ ಅವಳನ್ನು ಕೊಂದ!
Date: