ಅವಳನ್ನು ಮನೆಯಿಂದ ಹೊರ ದಬ್ಬಿದ್ರು, ಆದ್ರೆ ಇವತ್ತು? ಭಿಕ್ಷೆ ಬೇಡಿ ಬದುಕಿದ ಅವಳಿಂದು ಲೇಖಕಿ..!

Date:

ಅವತ್ತು ಆಕೆ ಅಪ್ಪ-ಅಮ್ಮನಿಗೇ ಬೇಡವಾಗಿದ್ದಳು..! ಚಿಕ್ಕವಯಸ್ಸಲ್ಲೇ ಹೆತ್ತ ತಂದೆ-ತಾಯಿಯೇ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದರು..! ಹದಿನಾಲ್ಕನೇ ವಯಸ್ಸಲ್ಲಿಯೇ ಅಪ್ಪ-ಅಮ್ಮ ಇದ್ದರೂ ಮನೆ ಬಿಟ್ಟು ಬೀದಿಯಲಿ ಬೆಳೆದಳು, ಹಾದಿಲೀ ಮಲಗಿದಳು, ಭಿಕ್ಷೆ ಬೇಡ್ತಾ ಹೊಟ್ಟೆಪಾಡನ್ನು ನೋಡಿಕೊಂಡಳು..! ಆದರೆ ಅವಳು ಭಿಕ್ಷೆ ಬೇಡುತ್ತಲೇ ಬದುಕು ಮುಂದುವರೆಸಲಿಲ್ಲ..! ಬದಲಾಗಿ ಅವಳೀಗ ಲೇಖಕಿ..! ಅಷ್ಟಕ್ಕೂ ಆಕೆಯನ್ನು ಅಪ್ಪ-ಅಮ್ಮನೇ ಮನೆಯಿಂದ ಆಚೆ ಅಟ್ಟಿದ್ದೇಕೆ ಗೊತ್ತಾ? ಅಪ್ಪ-ಅಮ್ಮ ಹೊರ ಹಾಕುವಂತ ತಪ್ಪನಂತೂ ಆಕೆ ಮಾಡಿರಲಿಲ್ಲ…!

transgender_rati_thumbnail1
ಅವರ ಹೆಸರು `ರತಿ ಪುನಿತವತಿಯರ್’. ಕೋಯಿಮುತ್ತೂರ್ನವರು. ಆಕೆ ತೃತೀಯ ಲಿಂಗಿಯಾಗಿ ಪರಿವರ್ತನೆ ಆಗುತ್ತಿದ್ದಾಳೆಂದು ಮನೆಯಿಂದ ಆಚೆ ಅಟ್ಟುತ್ತಾರೆ..! ಆಗ ಆಕೆಗೆ ಕೇವಲ 14 ವರ್ಷ ವಯಸ್ಸು..! ದಿನಗಳೆದಂತೆ ಆಕೆಯ ದೇಹ ರಚನೆಗಳು ಹೆಣ್ಣಂತೆ ಪರಿವರ್ತನೆ ಆಗ್ತಾ ಇದ್ದಿದ್ದರಿಂದ ಮನೆಯಿಂದ ಹೊರ ದಬ್ಬಿದ್ದರು..! ಅವಳ ಕಷ್ಟವನ್ನು ಅರ್ಥಮಾಡಿಕೊಂಡು ಪ್ರೀತಿ ತೋರಿಸುವ ಮಾನವೀಯತೆ ಅವರಿಗಿರಲಿಲ್ಲ..! ಹೀಗೆ ತನ್ನದಲ್ಲದ ತಪ್ಪಿಗಾಗಿ ಆಕೆ ಅವತ್ತು ಮನೆ ಬಿಡ ಬೇಕಾಯಿತು..! ಭಿಕ್ಷೆ ಬೇಡುತ್ತಾ ಜೀವನ ಸಾಗಿಸ್ತಾರೆ..! ಆಗಲೇ ಈ ಸಮದಾಯದ (ಲೈಂಗಿಕ ಅಲ್ಪ ಸಂಖ್ಯಾತ) ಇರರಂತೆ ನಾನೂ ಸಾಧಿಸಬೇಕೆಂದು ಪಣ ತೊಟ್ಟು ಬಿಡ್ತಾರೆ..! ಅದರಲ್ಲೂ ಮುಖ್ಯವಾಗಿ ಈ ಸಮುದಾಯದಿಂದ ಬಂದ ಮೊದಲ ನ್ಯೂಸ್ ರೀಡರ್ ಪದ್ಮಿನಿಯವರನ್ನು ನೆನೆಯುತ್ತಾರೆ..! ನಾನೂ ಕೂಡ ಇವರೆಲ್ಲರಂತಾಗ್ಬೇಕಂತ ಅವತ್ತೇ ಡಿಸೈಡ್ ಮಾಡಿ ಬಿಡ್ತಾರೆ..! ನಿರ್ಧರಿಸಿದ ಮೇಲೆ ಸುಮ್ಮನೇ ಕೂರಲಿಲ್ಲ..! ಹಂಗೋ ಹಿಂಗೋ 10ನೇ ತರಗತಿ ಪೂರೈಸಿದ ಮೇಲೆ ನಾನೂ ಪುಸ್ತಕ ಬರೆಯಬೇಕೆಂದು ನಿರ್ಧರಿಸ್ತಾರೆ..! ಆರಂಭದಲ್ಲಿ ಪ್ರಕಟಕರಿಗೋಸ್ಕರ ಹುಡಕಾಡಿ ಹುಡುಕಾಡಿ ಕೊನೆಗೂ ತನ್ನ ಪುಸ್ತಕವನ್ನು ಪ್ರಕಟ ಮಾಡುವಲ್ಲಿ ಗೆಲ್ತಾರೆ..! ಅವರ ಪುಸ್ತಕದ ಹೆಸರು `ಪಾದೈ’ ಅಥವಾ `ಫೂಟ್ಸ್ಟೆಪ್ಸ್’…! ಇದು ಅಲ್ಪಸಂಖ್ಯಾತ ಸಮುದಾಯದವರ ಕಷ್ಟದ ಬದುಕನ್ನು ವಿವರಿಸುತ್ತದೆ..! ಈ ಪುಸ್ತಕವನ್ನು ಬರೆದ ರತಿ ಪುನಿತವತಿಯರ್ ದೇಶದ ಮೊದಲ ಅಲ್ಪ ಸಂಖ್ಯಾತ ಸಮುದಾಯದ ಮೊದಲ ಲೇಖಕಿ..!
ಕಷ್ಟ, ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿದ್ರೆ ಯಾರುಬ ಏನು ಬೇಕಾದ್ರೂ ಆಗ ಬಹುದಲ್ವಾ?

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...