ಭಾರತದ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

1
436

ಭಾರತವು ಅಚ್ಚರಿಗಳ ಆಗರ. ಇಲ್ಲಿ ಕೆಲವು ಸಂಗತಿಗಳನ್ನು ಕಂಡರೆ ಹಾಗೂ ಕೇಳಿದರೆ ಮೈ ಜುಮ್ ಎನಿಸುತ್ತದೆ. ವಿಚಿತ್ರವೆಂದರೆ ಭಾರತೀಯರಾದ ನಮಗೇ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿಲ್ಲ. ನಾವಿಂದು ಭಾರತದ ಬಗ್ಗೆ ತಿಳಿದಿರುವ ಕೆಲವು ಅಂಶಗಳೂ ಕೂಡಾ ಸುಳ್ಳು. ಯೆಸ್ ಅಂತಹ ಪ್ರಮುಖ 10 ವಿಷಯಗಳು ಇಲ್ಲಿವೆ ನೋಡಿ.

1. ಭಾರತಕ್ಕೆ ರಾಷ್ಟ್ರೀಯ ಕ್ರೀಡೆ ಇಲ್ಲ..!?

hockey-india-1024x460

 

ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ಎಂದರೆ ಥಟ್ಟನೆ ಬರುವ ಉತ್ತರ ಹಾಕಿ ಎಂದು. ಆದರೆ ನಿಜವಾದ ಸತ್ಯ ಏನೆಂದರೆ ಭಾರತಕ್ಕೆ ರಾಷ್ಟ್ರೀಯ ಕ್ರೀಡೆಯೇ ಇಲ್ಲ..! ಹೌದು.. ಸ್ವಾತಂತ್ರ್ಯ ನಂತರ ಕಾಲದಲ್ಲಿ, ಅದರಲ್ಲೂ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾರತ ಅತ್ಯುತ್ತಮವಾಗಿ ಆಡುವ ಮೂಲಕ ಚಿನ್ನ ಕೊಳ್ಳೆ ಹೊಡೆಯುತ್ತಿತ್ತು. ಅದೇ ಕಾಲಾಂತರದಲ್ಲಿ ಜನರ ಬಾಯಿಂದ ಬಾಯಿಗೆ ಹರಡಿ ಹಾಕಿಯೇ ಭಾರತದ ಕ್ರೀಡೆ ಎಂದಾಯಿತು. ಆದರೆ ನಿಜವಾಗಿಯೂ ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಘೋಷಣೆ ಮಾಡಲಾಗಿಲ್ಲ..!

2. ಜಮ್ಮು-ಕಾಶ್ಮೀರಕ್ಕಿದೆ ಅಧಿಕೃತ ಧ್ವಜ..!

Jammu-Kashmir-flag-1024x681

ನೀವು ನಂಬುತ್ತೀರೋ ಬಿಡುತ್ತೀರೊ ಗೊತ್ತಿಲ್ಲ. ನಮ್ಮ ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಅಧಿಕೃತ ಧ್ವಜವೊಂದಿದೆ..! ಜಮ್ಮು ಕಾಶ್ಮೀರದ ಧ್ವಜದಲ್ಲಿ ಮೂರು ಗೆರೆಗಳಿದ್ದು ಅವುಗಳು ಜಮ್ಮು, ಕಾಶ್ಮೀರ ಮತ್ತು ಲಡಾಕ್ ಗಳನ್ನು ಸೂಚಿಸುತ್ತವೆ. ಅಲ್ಲದೇ ಕಾಶ್ಮೀರಕ್ಕೆ ತನ್ನದೇ ಆದ ಸಂವಿಧಾನವೂ ಇದೆ..!

3. ಭಾರತದ ಹಣವನ್ನು ಬೇರೆ ದೇಶಕ್ಕೆ ಒಯ್ಯುವಂತಿಲ್ಲ..!

rupee--621x414

ಭಾರತದ ಅಧಿಕೃತ ಕರೆನ್ಸಿ ರೂಪಾಯಿ. ಅದನ್ನು ಭಾರತ ಬಿಟ್ಟು ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಅದು ಅಪರಾಧವಾಗುತ್ತದೆ. ಆದರೆ ಇದು ಭಾರತೀಯರಿಗೆ ಅನ್ವಯವಾಗುವುದಿಲ್ಲ. ಭಾರತೀಯರು ಬಿಟ್ಟು ಬೇರೆ ದೇಶದ ಪ್ರಜೆಗಳು ರೂಪಾಯಿಯನ್ನು ಅವರ ದೇಶಕ್ಕೆ ಕೊಂಡೊಯ್ಯುವಂತಿಲ್ಲ..!

4. ಇತಿಹಾಸದಲ್ಲಿ ಅತಿ ಹೆಚ್ಚು ಜನ ಸೇರಿದ್ದು ಭಾರತದಲ್ಲಿ

KumbhMela2013TheGhousediary

ಅದು 10ನೇ ಫೆಬ್ರುವರಿ 2013. ಭಾರತದ ಅಲಹಾಬಾದ್ ನಲ್ಲಿ ಕುಂಭಮೇಳ ನಡೆಯುತ್ತಿತ್ತು. ಅದಕ್ಕೆ ವಿಶ್ವದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು. ಇಷ್ಟಕ್ಕೂ ಆ ಕುಂಭಮೇಳದಲ್ಲಿ ಸೇರಿದ್ದು ಎಷ್ಟು ಜನರು ಗೊತ್ತಾ..? ಬರೋಬ್ಬರಿ 3 ಕೋಟಿಗೂ ಹೆಚ್ಚು ಜನರು. ಅಂದು ಅಹಮದಾಬಾದ್, ಒಂದೇ ಸ್ಥಳದಲ್ಲಿ ಅತಿ ಹೆಚ್ಚಿನ ಜನರು ಸೇರಿದ ಖ್ಯಾತಿಗೆ ಪಾತ್ರವಾಗಿತ್ತು.

5. 70 ವರ್ಷದಿಂದ ಊಟವನ್ನೇ ಸೇವಿಸದ ಸಂತ..!

jani

ನಾವು ಒಂದೆರೆಡು ಕ್ಷಣ ಊಟವಿಲ್ಲದೇ ಇದ್ದರೆ ಹೇಗೇಗೋ ಆಡಿಬಿಡ್ತೀವಿ. ಆದರೆ ಇಲ್ಲೊಬ್ಬರು ಸಂತರಿದ್ದಾರೆ. ಅವರು ಬರೋಬ್ಬರಿ 74 ವರ್ಷಗಳಿಂದ ಊಟ, ನೀರನ್ನು ಸೇವಿಸಿಯೇ ಇಲ್ಲವಂತೆ. ಬೆಳಗ್ಗೆ ಬ್ರಷ್ ಮಾಡಿದಾಗ ಮಾತ್ರವೇ ಇವರು ಸ್ವಲ್ಪ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುತ್ತಾರೆ. ಅದನ್ನು ಹೊರತು ನೀರನ್ನಾಗಲೀ, ಊಟವನ್ನಾಗಲೀ ಮುಟ್ಟುವುದೇ ಇಲ್ಲವಂತೆ. ಇವರ ಈ ಸಾಧನೆ ವಿಜ್ಞಾನ ಲೋಕವನ್ನೇ ದಂಗುಬಡಿಸಿದೆ.

6. ಅಲ್ಲಿ ದನಗಳಿಗೂ ಫೋಟೋ ಐಡಿ ಇದೆ..!

Studios in smaller towns around Indian bordering villages in Murshidabad district in West Bengal are photographing cattle- mostly cows- and their owners. The photo of the animal and its owner is to be affixed on the Cattle ID Card of the cow. "It is a big hassle to photograph the animals inside a studio because they often react to flashguns frighteningly. The other day one cow jumped in fear at the light of the flashgun. After almost each shooting I need to clean the studio floor of cow dung and urine and clean up myself with a half-bath," said Pintu Mandal, a photographer in border town of Jalangi, who is getting at least 20 cattle photo assignments a day right now. Photos by SHAIKH AZIZUR RAHMAN supplied by SHAIKH AZIZUR RAHMAN [foraziz@yahoo.com] SMH FOREIGN 070821

ಈ ಮಾತನ್ನು ಜಗತ್ತಿನ ಯಾವ ಮನುಷ್ಯನೂ ನಂಬಲು ಸಾಧ್ಯವಿಲ್ಲ. ಆದರೆ ನಾವು ಭಾರತೀಯರಲ್ಲವೋ ಆದ್ದರಿಂದ ನಂಬಲೇಬೇಕು. ಅದೇನಪ್ಪಾ ಅಂದರೆ ಪಶ್ಚಿಮ ಬಂಗಾಳದಲ್ಲಿ ಪಶುಗಳಿಗೂ ಐಡಿ ಕಾರ್ಡ್ ಮಾಡಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಅಲ್ಲಿನ ಫೋಟೋಗ್ರಾಫರ್ಗಳಿಗೆ ಅದೃಷ್ಟ ಖುಲಾಯಿಸಿದಂತಾಗಿದೆ.

7. ರಿಯಲ್ ಮ್ಯಾಡ್ರಿಡ್ ಗಿಂತ ಹಳೆಯ ಫುಟ್ ಬಾಲ್ ಕ್ಲಬ್ ಭಾರತದಲ್ಲಿದೆ..!?

mohan-bagan

 

ಮೋಹನ್ ಬಗಾನ್.. ಬಹುಶಃ ಪತ್ರಿಕೆಯನ್ನು ಓದುವ ಹವ್ಯಾಸ ಉಳ್ಳವರು ಈ ಹೆಸರನ್ನು ಕೇಳಿರಲೇಬೇಕು. ಈ ಫುಟ್ಬಾಲ್ ಕ್ಲಬ್ ಯುರೋಪ್ ನ ಚೆಲ್ಸಿ, ಮ್ಯಾಂಚೆಸ್ಟರ್ ಸಿಟಿ, ಲಿವರ್ಫೂಲ್, ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾ, ಬಾಯೆರ್ನರ್ ಮ್ಯೂನಿಚ್, ಇಂಟರ್ ಮಿಲಾನ್ ಹಾಗೂ ಎಸಿ ಮಿಲಾನ್ ಗಳಿಗಿಂತಲೂ ಹಳೆಯದು ಎಂಬ ಖ್ಯಾತಿಗೆ ಪಾತ್ರವಾಗಿದೆ.

8. ವಿಶ್ವದ ಮಹಾನ್ ಕುಡುಕರು ನಮ್ಮವರೆ..!

whiskey

ಭಾರತೀಯರು ಎಷ್ಟೊಂದು ಕುಡಿಯುತ್ತಾರೆ ಎಂದರೆ ವಿಶ್ವದಲ್ಲಿ ಉತ್ಪಾದನೆಯಾಗುವ ಶೇಕಡಾ 50ರಷ್ಟು ವಿಸ್ಕಿಯನ್ನು ಭಾರತೀಯರೇ ಕುಡಿದು ಮುಗಿಸುತ್ತಾರೆ..! ಅದೇ ಕಾರಣಕ್ಕೆ ಭಾರತದಲ್ಲಿ ಮದ್ಯದ ಉದ್ಯಮ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಆದ್ದರಿಂದ ಮದ್ಯದ ದೊರೆಗಳು ಅಷ್ಟೊಂದು ಶ್ರೀಮಂತರಾಗಿದ್ದಾರೆ.

9. ವಿಶ್ವದ ಅತಿ ದೊಡ್ಡ ಬುಕ್ ಫೇರ್ ನಮ್ಮಲ್ಲಿದೆ..!

bookfair-kolkata.

ಭಾರತೀಯರು ಅತಿ ಹೆಚ್ಚಿನ ಪ್ರಮಾಣದಲ್ಲಿ ಓದುತ್ತಾರೆ ಎನ್ನಲು ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ..? ಅದೇನಪ್ಪಾ ಅಂದ್ರೆ ವಿಶ್ವದ ಅತಿ ದೊಡ್ಡ ಬುಕ್ ಫೇರ್ ಭಾರತದಲ್ಲಿದೆ. ಅದಕ್ಕೆ ಕೊಲ್ಕತ್ತಾ ಬುಕ್ ಫೇರ್ ಎಂದು ಹೆಸರಿದೆ.

10. ಭಾರತಕ್ಕಿಲ್ಲ ರಾಷ್ಟ್ರೀಯ ಭಾಷೆ..!

languages

ಈ ವಿಷಯ ಅಚ್ಚರಿಯಲ್ಲೇ ಅಚ್ಚರಿ ಎನಿಸುತ್ತದೆ. ಆದರೆ ಭಾರತಕ್ಕೆ ಯಾವುದೇ ರಾಷ್ಟ್ರಿಯ ಭಾಷೆ ಇಲ್ಲ. ಭಾರತದಾದ್ಯಂತ ಸುಮಾರು 26 ಪ್ರಮುಖ ಭಾಷೆಗಳಿವೆ. ಆದರೆ ಹೆಚ್ಚಿನ ಭಾಗದಲ್ಲಿ ಹಿಂದಿಯನ್ನು ಮಾತಾನಾಡುತ್ತಾರೆ. ಆದ್ದರಿಂದ ಹಿಂದಿಯನ್ನೇ ಹೆಚ್ಚಿನವರು ರಾಷ್ಟ್ರೀಯ ಭಾಷೆ ಎಂದುಕೊಂಡಿದ್ದಾರೆ. ಆದರೆ ಅದು ತಪ್ಪು.

1 COMMENT

LEAVE A REPLY

Please enter your comment!
Please enter your name here