ಯುವತಿಯೊಬ್ಬಳನ್ನು ಮದುವೆಯಾಗಿ ಆಕೆಯಿಂದ ಲಕ್ಷಾಂತರ ರೂ ಹಣ ಪೀಕಿ ಪತಿರಾಯನೊಬ್ಬ ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಬೆಳಕಿಗೆ ಬಂದಿದೆ.ಕಾರ್ಕಳ ತಾಲೂಕಿನ ಬೈಲೂರಿನ ಸಂದೀಪ್ ಶೆಟ್ಟಿ ಪತ್ನಿಯನ್ನು ವಂಚಿಸಿದ ಭೂಪ. ಬೈಲೂರಿನ ಸಂದೀಪ್ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದಾನೆ.ಈತ ಸುಭಾಷನಗರ ನಿವಾಸಿ ಪರ್ವಿನ್ ತಾಜ್ (೨೯) ಎಂಬಾಕೆಯನ್ನು ೨೦೧೮ರ ಏಪ್ರಿಲ್ ೧೮ರಂದು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಮಾರನಹಳ್ಳಿ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಸಭಾಭವನದಲ್ಲಿ ವಿವಾಹವಾಗಿ ಅತ್ತೆ ಮನೆಯಲ್ಲಿ ವಾಸವಾಗಿದ್ದರು. ೨೦೧೯ರ ಸೆಪ್ಟೆಂಬರಿನಲ್ಲಿ ಊರಿಗೆ ಬಂದ ಸಂದೀಪ್ ಶೆಟ್ಟಿ ವಾಪಸ್ಸಾಗದ ಹಿನ್ನೆಲೆಯಲ್ಲಿ ಪರ್ವಿನ್ ಕರೆ ಮಾಡಿದ್ದು, ಸಂಪರ್ಕಕ್ಕೆ ಸಿಗದಿದ್ದಾಗ ಆಕೆ ಆತನ ಸಹೋದರರಾದ ಸಂದೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಆಗ ಅವರಿಬ್ಬರು ಇನ್ನೊಮ್ಮೆ ಕರೆಮಾಡಬೇಡ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರ್ವಿನ್ ನೆಲಮಂಗಲ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲ ಈ ಆಸಾಮಿ ಸಂದೀಪ್ ಶೆಟ್ಟಿ ಮಾವನಿಂದ ಅಂದರೆ ಪರ್ವಿನ್ ತಂದೆಯಿಂದ ಸುಮಾರು ೬ ಲಕ್ಷದ ೪೦ ಸಾವಿ ರೂ ಹಣವನ್ನು ಸಾಲವಾಗಿ ಪಡೆದಿದ್ದಾನಂತೆ! ಅದನ್ನು ಕೂಡ ಹಿಂತಿರುಗಿಸಿಲ್ಲ. ಅಲ್ಲದೆ ಪರ್ವಿನ್ ತನನ್ನು ಹುಡುಕಿಕೊಂಡು ಬೈಲೂರಿಗೆ ಬಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆಂದು ಹೇಳಲಾಗಿದ್ದು, ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಳಲ್ಲ ಅವನೇ ಅವಳಿಗೆ ಮದುವೆಯಾಗಿ ಲಕ್ಷ ಲಕ್ಷ ವಂಚಿಸಿದ ಕಥೆ ಇದು!
Date: