3ನೇ ಭಾರಿ ಭಾರತ ವಿಶ್ವ ಚಾಂಪಿಯನ್ ಆಗುತ್ತದೆ ಎಂದು ಕನಸುಕಂಡಿದ್ದ, ಆಸೆ ಇಟ್ಟುಕೊಂಡಿದ್ದ ಭಾರತೀಯರ ಪಾಲಿಗೆ ಇದು ಕರಾಳ ದಿನ. ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ನಲ್ಲಿ ಭಾರತ 18ರನ್ಗಳಿಂದ ಸೋತಿದೆ. ನ್ಯೂಜಿಲೆಂಡ್ ನೀಡಿದ 240ರನ್ಗಳನ್ನು ಚೇಸ್ ಮಾಡಲು ಭಾರತ ವಿಫಲವಾಗಿದೆ.
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಗೆಲುವಿನ ದಡ ಸೇರಿಸಲು ಹೋರಾಡಿದರೂ ಅಂತಿಮ ಹಂತದಲ್ಲಿ ಅವರಿಂದ ಅದು ಸಾಧ್ಯವಾಗಿಲ್ಲ. ಜಡೇಜಾ 59 ಬಾಲ್ಗಳಲ್ಲಿ 77ರನ್ ಚಚ್ಚಿದರೂ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಧೋನಿ 72 ಬಾಲ್ ಎದುರಿಸಿ 50 ರನ್ ಮಾಡಿ ಹೋರಾಟ ನಡೆಸಿದ್ರು. ಧೋನಿ ಇದ್ದರೆ ಸಾಕು ಖಂಡಿತಾ ಗೆಲ್ಲಿಸಿಕೊಡ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಅದು ಆಟ ಲೆಕ್ಕವಿಲ್ಲದಷ್ಟು ಇಂಥಾ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿಗೆ ಇಂದು ಅದು ಸಾಧ್ಯವಾಗಿಲ್ಲ. ಆದರೆ, ಕೆಲವರು ಧೋನಿ ವೇಗವಾಗಿ ಆಡಬೇಕಿತ್ತು. ಸೋಲಿಗೆ ಧೋನಿ ನಿಧಾನ ಗತಿಯ ಬ್ಯಾಟಿಂಗೇ ಕಾರಣ ಎನ್ನುತ್ತಿದ್ದಾರೆ.
ಒಂದು ವೇಳೆ ಧೋನಿ ಆರಂಭದಿಂದಲೂ ಹೊಡಿ ಬಡಿಗೆ ಮುಂದಾಗಿದ್ದಾರೆ. ಭಾರತದ ಸೋಲಿನ ಅಂತರ ಕೂಡ ಇನ್ನೂ ಹೆಚ್ಚಿರುವ ಸಾಧ್ಯತೆ ಇತ್ತು ಎನ್ನುವುದನ್ನು ಯಾರೂ ಲೆಕ್ಕ ಹಾಕಲ್ಲ. ಧೋನಿ ಇದ್ದಿದ್ದರಿಂದ ಗೆಲುವಿನ ಸನಿಹ ಭಾರತ ಹೋಗಿದ್ದು.
ಭಾರತ ಸೋಲಿಗೆ ಕಾರಣ ಆರಂಭಿಕರಾದ ರೋಹಿತ್ ಶರ್ಮಾ, ಕನ್ನಡಿಗ ಕೆ.ಎಲ್ ರಾಹುಲ್. ನಾಯಕ ವಿರಾಟ್ ಕೊಹ್ಲಿ ವೈಫಲ್ಯ..! ಈ ಮೂವರು ಕೇವಲ 1ರನ್ ಮಾತ್ರ ಮಾಡಿದ್ರು. ದಿನೇಶ್ ಕಾರ್ತಿಕ್ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಂಡ್ರು. ಈ ಬಗ್ಗೆ ಯೋಚನೆ ಮಾಡಬೇಕು. ಯುವ ಆಟಗಾರ ರಿಷಭ್ ಪಂತ್, (32) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ(32) ಇನ್ನು ಸ್ವಲ್ಪ ಹೊತ್ತು ನೆಲಕಚ್ಚಿ ಆಡಿದ್ದರೂ ಭಾರತ ಗೆಲ್ಲುತ್ತಿತ್ತು. ಹಾಗಂತ ಸೋಲಿಗೆ ಇವರೇ ಕಾರಣ ಎನ್ನಲಾಗದು..! ಧೋನಿಯನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ.. ಇಂದಿನ ಪಂದ್ಯ ನಮ್ಮ ಜೊತೆಗಿರಲಿಲ್ಲ ಎಂದಷ್ಟೇ ಹೇಳಬಹುದು.. ವಿಶ್ವಕಪ್ ನಮಗೆ ಈಸಲ ದಕ್ಕದೇ ಇರಬಹುದು.,..ಆದರೆ ನಮ್ಮವರು ವಿಶ್ವದ ಮನವನ್ನೇ ಗೆದ್ದಿದ್ದಾರೆ ಏನಂತೀರಾ?