ಇಲ್ಲೊಂದು ಕಡೆ ಹನುಮ ಸ್ವರೂಪಿ ಕೋತಿ ಭಕ್ತರನ್ನು ಆರ್ಶೀವದಿಸುತ್ತಿದೆ. ಪ್ರತೀ ಶನಿವಾರ ಭಕ್ತರನ್ನು ಆರ್ಶೀವದಿಸಲು ತಪ್ಪದೇ ಮಂಗಳಾರತಿ ಟೈಮಲ್ಲಿ ಹಾಜರಾಗುತ್ತದೆ.
ಹೌದು, ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆ ಇರುತ್ತದೆ. ಶನಿವಾರವನ್ನು ಆಂಜನೇಯ ಸ್ವಾಮಿ ವಾರ ಎಂಬ ವಾಡಿಕೆ ಇದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ. ವಿಶೇಷವೆಂದರೆ ಇಲ್ಲೊಂದು ದೇವಸ್ಥಾನದಲ್ಲಿ ಈ ದಿನ ಕೋತಿಯೊಂದು ಖಾಯಂ ಆಗಿ ಪೂಜಾ ಸಮಯದಲ್ಲಿ ಪ್ರತ್ಯಕ್ಷವಾಗುತ್ತದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ವಾರದಿಂದ ಮಂಗಳಾರತಿ ಸಂದರ್ಭದಲ್ಲಿ ಕೋತಿ ಹಾಜರಾಗಿ, ಆಂಜನೇಯನ ದರ್ಶನ ಪಡೆದ್ದು, ತಾನು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಶೀರ್ವಾದ ಮಾಡುತ್ತಿದೆ.
ದೇವಾಲಯಕ್ಕೆ ಬರುವವರು ಕೂಡ ಕೋತಿಯನ್ನು ಹಚ್ಚಿಕೊಂಡಿದ್ದಾರೆ. ಅದನ್ನು ಪ್ರೀತಿಸುವ ಜನ ಹನುಮನಿಗೆ ತಂದ ಪ್ರಸಾದವನ್ನು ಅದಕ್ಕೆ ನೀಡುತ್ತಾರೆ. ಸಾಕ್ಷಾತ್ ಆಂಜನೇಯನೇ ಬಂದು ತಮಗೆ ದರ್ಶನ ನೀಡುತ್ತಿದ್ದಾನೆಂಬುದು ಭಕ್ತರು ಭಕ್ತಿಯಿಂದ ನಂಬಿದ್ದಾರೆ.
ಆಂಜನೇಯ ಸ್ವಾಮಿ ದರ್ಶನ ಪಡೆದು ಭಕ್ತರಿಗೆ ಆಶೀರ್ವಾದ ಮಾಡುವ ಕೋತಿ!
Date: