ಆಂಟಿ, ಡುಮ್ಮಿ, ಕಪ್ಪಗಿದ್ದೀಯ ಅಂದಿದ್ರು; ಪ್ರಿಯಾಮಣಿ ಅಳಲು

Date:

ಮನೋಜ್ ಬಾಜಪೇಯಿ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ನಟಿಸಿರುವ ‘ಫ್ಯಾಮಿಲಿ ಮ್ಯಾನ್ 2’ ಸಿನಿಮಾದ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ, ಮನೋಜ್ ಬಾಜಪೇಯಿ ಪತ್ನಿ ಪಾತ್ರ ನಿರ್ವಹಿಸಿದ್ದು ಮೊದಲನೇ ಆವೃತ್ತಿಯಲ್ಲೂ ಗಮನ ಸೆಳೆದಿದ್ದರು.

ಫ್ಯಾಮಿಲಿ ಮ್ಯಾನ್ ಎರಡನೇ ಆವೃತ್ತಿಯಲ್ಲೂ ಪ್ರಿಯಮಾಣಿ ಪಾತ್ರ ಮೆಚ್ಚುಗೆ ಗಳಿಸಿಕೊಂಡಿದೆ. ಮದುವೆ ಆದ್ಮೇಲೆ ಒಳ್ಳೊಳ್ಳೆ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಿರುವ ಪ್ರಿಯಾಮಣಿ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ”ನನ್ನ ಆಂಟಿ ಅಂದ್ರು, ಕಪ್ಪು ಆಗಿ ಕಾಣ್ತಿಯಾ ಅಂದ್ರು, ಡುಮ್ಮಿ ಅಂದ್ರು” ಎಂದು ಬೇಸರ ಹೊರಹಾಕಿದ್ದಾರೆ. ಮುಂದೆ ಓದಿ….

‘ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ತೂಕ 65 ಕೆಜಿವರೆಗೂ ಏರಿಕೆಯಾಗಿತ್ತು. ಈಗ ಇರುವುದಕ್ಕಿಂತ ದಪ್ಪ ಕಾಣುತ್ತಿದ್ದೆ. ಆ ಸಂದರ್ಭದಲ್ಲಿ ಬಹಳಷ್ಟು ಜನರು, ‘ಹೇ ನೀವು ತುಂಬಾ ದಪ್ಪ ಕಾಣುತ್ತೀರಿ, ಏಕೆ ಇಷ್ಟು ದಪ್ಪ ಆದ್ರಿ’ ಎಂದು ಹೇಳಿದ್ದರು. ಆದ್ರೀಗ, ”ನೀವು ಏಕೆ ತೆಳ್ಳಗೆ ಆಗಿದ್ದೀರಾ, ನೀವು ದಪ್ಪ ಇದ್ದಾಗಲೇ ತುಂಬಾ ಸುಂದರವಾಗಿ ಕಾಣ್ತಿದ್ರಿ’ ಅಂತಾರೆ. ಸಣ್ಣ ಇದ್ದಾಗಲೂ ಮಾತಾಡ್ತಾರೆ, ದಪ್ಪ ಆದರೂ ಮಾತಾಡ್ತಾರೆ. ಮೊದಲು ನೀವು ನನ್ನ ಯಾವ ರೀತಿ ಇಷ್ಟಪಡ್ತೀರಾ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳಿದ್ದೇನೆ’ ಎಂದು ಪ್ರಿಯಾಮಣಿ ಹೇಳಿಕೊಂಡಿದ್ದಾರೆ..

”ಬಹಳಷ್ಟು ಜನ ನನ್ನನ್ನು ಕಪ್ಪು ಎಂದರು. ನಿನ್ನ ಬಣ್ಣ ಕಪ್ಪು ಎಂದು ಟೀಕಿಸಿದರು. ಚರ್ಮ ಕಪ್ಪಾಗಿದ್ದರೆ ತಪ್ಪೇನಿದೆ? ಕಪ್ಪು ಎಂದು ಯಾರನ್ನು ನಿಂದಿಸಬೇಡಿ. ಅದರಲ್ಲಿಯೂ ಸುಂದರತೆ ಇದೆ” ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.

ನಾನು ಮೇಕಪ್ ಮಾಡದಿರುವ ಫೋಟೋ ಹಾಕಿದ್ರೆ ತುಂಬಾ ಜನರೂ ಅದರಲ್ಲಿಯೂ ಟೀಕೆ ಮಾಡ್ತಾರೆ. ಓಹ್ ನೀನು ಮೇಕಪ್ ಇದ್ದರೆ ಚೆನ್ನಾಗಿ ಕಾಣ್ತಿಯಾ, ಮೇಕಪ್ ಇಲ್ಲಂದ್ರೆ ಆಂಟಿ ಥರ ಇದ್ದೀಯಾ ಎಂದು ಹೇಳ್ತಾರೆ. ನಾಳೆ ನೀವು ಆಂಟಿ-ಅಂಕಲ್ ಆಗಲೇಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...