ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿ: ವ್ಯಕ್ತಿ ಸಾವು

0
166

ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವು ,ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಲಿಂಗದೇವರು ಕೊಪ್ಪಲಿನಲ್ಲಿ ನಡೆದಿದೆ. ಸ್ವಾಮಿ(30) ಮೃತ ದುರ್ದೈವಿ, ಮಂಜು ಮತ್ತು ಕುಮಾರ ಎಂಬುವರಿಗೆ ಗಾಯಗೊಂಡಿದ್ದಾರೆ.

ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ನಿವಾಸಿಗಳು, ಅಪಘಾತದ ಬಳಿಕ ಆಟೋ ಚಾಲಕ ಪರಾರಿಯಾಗಿದ್ದಾರೆ. ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.