ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಈಗ ರಾಜಕಾರಣ. ಪಾರ್ಲಿಮೆಂಟ್ ಪ್ರವೇಶಿಸಲು ಉತ್ಸುಕರಾಗಿದ್ದಾರೆ. ಪೂರ್ವ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮೇಲೆ ಕಿಡಿಕಾರಿದ್ದಾರೆ.
ಶಾಹಿದ್ ಅಫ್ರಿದಿ ತಮ್ಮ ಆತ್ಮಕಥೆ ‘ಗೇಮ್ ಚೇಂಜರ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ, ರಾಜಕಾರಣಿ ಗೌತಮ್ ಗಂಭೀರ್ ಬಗ್ಗೆ ಗರಂ ಆಗಿ ಬರೆದುಕೊಂಡಿದ್ದಾರೆ.
ಗೌತಮ್ ಗಂಭೀರ್ ಹಾಗೂ ನನ್ನ ನಡುವೆ ನಾನಾ ಬಾರಿ ಜಗಳಗಳು ಆಗಿವೆ. ಕೆಲವು ವೃತ್ತಿಗೆ ಸಂಬಂಧಿಸಿದ್ದಾಗಿದ್ದು, ಮತ್ತೊಂದಿಷ್ಟು ವೈಯಕ್ತಿಕವಾಗಿತ್ತು. ಕ್ರಿಕೆಟಿನಲ್ಲಿ ಗಂಭೀರ್ ಗೌತಮ್ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಆದರೆ ಅವರಿಗೆ ಆ್ಯಟಿಟ್ಯೂಡ್ ಸಮಸ್ಯೆ ತುಂಬಾ ಇದೆ. ಆತ ತನ್ನನ್ನು ತಾನು ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ಮೀರಿಸುವ ಆಟಗಾರ ಎಂದು ತಿಳಿದುಕೊಂಡಿದ್ದಾರೆ ಎಂದು ಅಫ್ರಿದಿ ಸಿಡುಕಿದ್ದಾರೆ.
2007 ರಲ್ಲಿ ನಡೆದ ಜಗಳದ ಕುರಿತು ಪ್ರಸ್ತಾಪ ಮಾಡಿರುವ ಶಾಹಿದ್ ಅಫ್ರಿದಿ, ಗೌತಮ್ ರನ್ ಓಡುತ್ತಿದ್ದಾಗ ನಡೆದ ಘಟನೆ ಈಗಲೂ ನೆನಪಿದೆ. ಆತ ತನ್ನ 1 ರನ್ ಪೂರ್ಣಗೊಳಿಸಲು ನನ್ನ ಮೇಲೆಯೇ ನುಗ್ಗಿ ಬಂದಿದ್ದ. ಆ ವೇಳೆ ಅಂಪೈರ್ ನಡುವೆ ಬಂದು ಪರಿಸ್ಥಿತಿ ತಿಳಿಸಿಗೊಳಿಸಿದ್ದರು ಎಂದು ಅಫ್ರಿದಿ ಬರೆದುಕೊಂಡಿದ್ದಾರೆ.
ಇಬ್ಬರ ನಡುವೆ ಅನೇಕ ವಿಚಾರಗಳಿಗೆ ಸಾಕಷ್ಟು ಜಗಳ ಬಾರಿ ಆಗಿದ್ದು. ಕರಾಚಿಯಲ್ಲಿ ಇಂತಹ ವ್ಯಕ್ತಿಗಳನ್ನು ‘ಉರ್ಕೊಳ್ಳುವವರು’ ಎಂದು ಕರೆಯುತ್ತೇವೆ ಎಂದು ಹೇಳಿರುವ ಅಫ್ರಿದಿ ನನಗೆ ಒಳ್ಳೆಯ ನಡುವಳಿಕೆ ಇರುವವರನ್ನು ಕಂಡರೆ ಇಷ್ಟ ಎಂದಿದ್ದಾರೆ. ಗೌತಮ್ ಯಾವಾಗಲು ನೆಗೆಟಿವ್ ಆಗಿರುತ್ತಿದ್ದರು ಎಂದಿದ್ದಾರೆ.
ಆತ್ಮಚರಿತ್ರೆಯಲ್ಲಿ ಗೌತಮ್ ಗಂಭೀರ್ ಬಗ್ಗೆ ಅಫ್ರಿದಿ ಶಾಕಿಂಗ್ ಹೇಳಿಕೆ..! ಗೌತಿ ನಿಜಕ್ಕೂ ಹೀಗೆ ಅಂದುಕೊಂಡಿದ್ದಾರಾ?
Date: