ಆತ್ಮಹತ್ಯೆಗೆ ಮುನ್ನ ವೃದ್ದ ದಂಪತಿಗಳಿಂದ ಮನವಿ.. ಪ್ರೀತಿಯಿಂದ ಸಾಕಿದ ನಾಯಿ,ಬೆಕ್ಕನ್ನ ನೋಡಿಕೊಳ್ಳುವಂತೆ ಬೇಡಿಕೆ..!!
ಮಂಗಳೂರಿನ ಕೋಟೆಕಾರು ಬೀರಿಯಲ್ಲಿ ವೃದ್ದ ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.. ಅಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ 74 ವರ್ಷದ ದೇವರಾಜ್ ಗಾಣಿಗ ಹಾಗು ಅವರ ಪತ್ನಿ ವಸಂತಿ(64) ಸಾವಿಗೆ ಶರಣಾಗಿದ್ದಾರೆ…
ಈ ವೃದ್ದದಂಪತಿಗಳು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.. ಜೊತೆಗೆ ಮಕ್ಕಳಿಲ್ಲದ ಈ ದಂಪತಿ ಬೆಕ್ಕು ಹಾಗು ನಾಯಿಯನ್ನ ಮಕ್ಕಳ ಹಾಗೆ ಸಾಕಿದ್ರು.. ಜೀವನದ ಜಿಗುಪ್ಸೆ ಉಂಟಾಗಿ ಸಾವಿಗೆ ಶರಣಾಗಿದ್ದು, ತಮ್ಮ ಮನೆಯನ್ನ ವಸಂತಿ ಅವರ ಅಣ್ಣನ ಮಗಳ ಹೆಸರಿಗೆ ಬರೆದು, ಅವರೇ ತಮ್ಮ ಸಾಕು ಪ್ರಾಣಿಗಳನ್ನ ಪೋಷಿಸಬೇಕೆಂದು, ಮನೆಯಲ್ಲಿನ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..