ಆದೇಶಕ್ಕೂ ಡೋಂಟ್ ಕೇರ್: ಎಗ್ಗಿಲ್ಲದೇ ಪ್ಲಾಸ್ಟಿಕ್ ಬಳಕೆ, ನಿರ್ಮೂಲನೆ ಯಾವಾಗ!?

Date:

ಬೆಂಗಳೂರು: ಪ್ಲಾಸ್ಟಿಕ್ ಬ್ಯಾನ್ ಮಾಡಿದರೂ ಇನ್ನೂ ಬಳಕೆಯಲ್ಲಿದ್ದು, ನಿರ್ಮೂಲನೆಗೆ ಆಸಕ್ತಿ ಕಳೆದುಕೊಂಡ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾರ ಏಕ ಬಳಕೆ‌ ಪ್ಲಾಸ್ಟಿಕ್ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಬಳಕೆ ತುಂಬಾ ಸುಲಭವಾದ್ದರಿಂದ ಈ ಉತ್ಪನ್ನಗಳಿಗೆ ಆಧ್ಯತೆ ನೀಡಲಾಗುತ್ತಿದೆ. ನಾವು ನಗರದ ಪ್ರಮುಖವಾದ ಕೆ.ಆರ್. ಮಾರ್ಕೆಟ್ ನಲ್ಲಿ ನೋಡೊದಾದರೆ ಪ್ರತಿಯೊಬ್ಬ ವ್ಯಾಪಾರಿಗಳು ಏಕ ಬಳಕೆ ಪ್ಲಾಸ್ಟಿಕ್ ನಲ್ಲೆ ತರಕಾರಿ ಸೇರಿದಂತೆ ಹೂವುಗಳನ್ನ ಗ್ರಾಹಕರಿಗೆ ನೀಡುತ್ತಾರೆ. ಇದು ನೋಡಲು ನಮಗೆ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತದೆ.
ಕೇವಲ ಬಿಬಿಎಂಪಿ ಅಧಿಕಾರಿಗಳು ಇಂತಹ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ದಂಡ ಹಾಕುತ್ತಾರೆ ಹೊರತು ಮೂಲತಃ ಯಾವ ಫ್ಯಾಕ್ಟರಿಗಳಲ್ಲಿ ಉತ್ಪಾದನೆ ಆಗುತ್ತದೆ ಅಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪಾದನೆ ಆಗುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಎಲ್ಲೆಲ್ಲಿ ಪ್ಲಾಸ್ಟಿಕ್ ಹೇಗೆ ಉತ್ಪಾದನೆ ಆಗುತ್ತದೆ ಎಂಬುದು ಅಧಿಕಾರಿಗಳಿಗೆ ಗೊತ್ತು. ಆದರೆ ಈ ಬಗ್ಗೆ ಗೊತ್ತಿದ್ದರೂ ಅವರು ಇದಕ್ಕೆ ಕಡಿವಾಣ ಹಾಕದೆ ಕಮೀಷನ್ ಪಡೆದು ಸುಮ್ಮನಾಗುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದರು.
ಇನ್ನೂ ಏಕ ಬಳಕೆ ಪ್ಲಾಸ್ಟಿಕ್‌ನ್ನ ಒಮ್ಮೆ ಬಳಸಿದ ಬಳಿಕ ಅದನ್ನ ಎಲ್ಲೆಂದರಲ್ಲಿ ಎಸೆಯಲ್ಲಾಗುತ್ತೆ, ಹೀಗೆ ಎಸೆಯುವ ಪ್ಲಾಸ್ಟಿಕ್ ಕೆರೆ ಸೇರಿದಂತೆ ಇನ್ನೀತರ ಪ್ರದೇಶಗಳಲ್ಲಿ‌ ಬಿದ್ದು ಜಲಚರಗಳಿಗೆ ಪರಿಸರಕ್ಕೆ ಹಾಗೂ ಪ್ರಾಣಿಗಳಿಗೆ ಹಾನಿಯಾಗುತ್ತಿದೆ ಅಂತ ಪರಿಸರ ಪ್ರೇಮಿಗಳು ಪ್ಲಾಸ್ಟಿಕ್ ಬಳಕೆಗೆ ಅವಕಾಶ ಕೊಡದೆ ಸಂಪೂರ್ಣ ನಿಷೇಧ ಮಾಡಿ ಜನರಲ್ಲಿ‌ ಜಾಗೃತಿ ಮೂಡಿಸಲು ಮುಂದಾಗಬೇಕು ಅಂತ ಆಗ್ರಹಿಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...