ಆನೇಕಲ್: ಮಗನಿಂದಲೇ ತಂದೆಯ ಬರ್ಬರ ಕೊಲೆ!
ಬೆಂಗಳೂರು: ಮಗ ಚಾಕುವಿನಿಂದ ತಂದೆಗೆ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ ವೇಲಾಯುದನ್(76) ಕೊಲೆಯಾದ ತಂದೆಯಾಗಿದ್ದು, ವಿನೋದ್ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇವರು ಮೂಲತಃ ಕೇರಳದ ಏರಿಮಲೆಯವರು.
ಕಳೆದ ರಾತ್ರಿ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ತಂದೆ ಮತ್ತು ಮಗನ ನಡುವೆ ನಡೆದ ಗಲಾಟೆ ನಡೆದಿದೆ. ಆಗ ಮಗ ವಿನೋದ್ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆ ವೇಲಾಯುದನ್ ಅವರಿಗೆ ಇರಿದು ಕೊಲೆ ಮಾಡಿದ್ದಾನೆ. ವೇಲಾಯುದನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ಮೃತದೇಹವನ್ನ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.