ಆಪ್ತಮಿತ್ರ ಕನ್ನಡ ಚಿತ್ರರಂಗ ಕಂಡ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದು. ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಅಂಶವನ್ನು ಒಳಗೊಂಡಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ರಮೇಶ್ ಅರವಿಂದ್ ಅವರು ಅಭಿನಯಿಸಿದ್ದರು. ಚಿತ್ರಕ್ಕೆ ಪಿ ವಾಸು ಅವರ ನಿರ್ದೇಶನ ಇತ್ತು ಮತ್ತು ಇದಾದ ನಂತರ ಪಿ ವಾಸು ಅವರು ಹಲವಾರು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇದೀಗ ಅದೇ ಪಿ ವಾಸು ನಿರ್ದೇಶನದ ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಚಿತ್ರದ ಪ್ರೆಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ರವಿಚಂದ್ರನ್ ಅವರು ಚಿತ್ರದ ಕುರಿತಾಗಿ ಮಾತನಾಡುವ ವೇಳೆ ದ್ವಾರಕೀಶ್ ಚಿತ್ರ ಬ್ಯಾನರ್ ಕುರಿತಾಗಿ ಮಾತನಾಡಿದರು. ದ್ವಾರಕೀಶ್ ಚಿತ್ರ ಬ್ಯಾನರ್ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಆಪ್ತಮಿತ್ರ ಚಿತ್ರದ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದರು. ಆಪ್ತಮಿತ್ರ ಚಿತ್ರ ಶುರುವಾಗುವ ಮುನ್ನವೇ ನಾನು ಈ ಚಿತ್ರ ಖಂಡಿತಾ ಗೆಲ್ಲುತ್ತದೆ ಎಂದು ಹೇಳಿದ್ದೆ ನಾನು ಈ ಚಿತ್ರ ಮಾಡಬೇಕಿತ್ತು ಎಂದು ರವಿಚಂದ್ರನ್ ಅವರು ಹೇಳಿದರು.