ತನ್ನ ಖಾಯಂ ನಿವಾಸಿಗಳು ಹಾಗೂ ಅವರ ಹಕ್ಕುಗಳನ್ನು ನಿರ್ಧರಿಸುವ ಅಧಿಕಾರವನ್ನು ಜಮ್ಮು ಕಾಶ್ಮೀರದ ವಿಧಾನಸಭೆಗೆ ಸಂವಿಧಾನದ 35ಎ ವಿಧಿ ನೀಡಿದರೆ, 370ನೇ ವಿಧಿ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುತ್ತದೆ.
35ಎ ವಿಧಿಯನ್ನು ಜಮ್ಮು ಕಾಶ್ಮೀರದ ಹಿಂದಿನ ಆಡಳಿತಗಾರ ಹರಿ ಸಿಂಗ್ ಅವರು ಮಂಡಿಸಿದ್ದರು. ಈ ಶಾಸನ ಹೊರಗಿನವರು ರಾಜ್ಯದಲ್ಲಿ ಆಸ್ತಿಯನ್ನು ಹೊಂದುವುದು ಹಾಗೂ ಸರಕಾರಿ ಉದ್ಯೋಗಗಳನ್ನು ಪಡೆಯುವುದನ್ನು ತಡೆಯುತ್ತದೆ. ಸಂವಿಧಾನ, ಧ್ವಜ ಹಾಗೂ ರಾಷ್ಟ್ರೀಯ ಭದ್ರತೆ ಹೊರತುಪಡಿಸಿ ರಾಜ್ಯಕ್ಕೆ ಇತರ ವಿಚಾರಗಳಲ್ಲಿ ತನ್ನದೇ ಕಾನೂನುಗಳನ್ನು ನಿರ್ವಹಿಸುವ ಅಧಿಕಾರನವ್ನು ನೀಡುವ ಸಂವಿಧಾನದ 370ನೇ ವಿಧಿಯ ಭಾಗ ಇದಾಗಿದೆ.
ಆದರೆ ಇದೀಗ ಮೋದಿ ಸರ್ಕಾರ ವಿಶೇಷ ಆದೇಶವನ್ನು ಹೊರಡಿಸಿ ಆರ್ಟಿಕಲ್ 370 ನ್ನು ರದ್ದುಗೊಳಿಸಿದೆ ಇದರಿಂದ ಕಾಶ್ಮೀರ ಕ್ಕಿದ್ದ ವಿಶೇಷ ಸ್ಥಾನಮಾನ ಕಳೆದುಕೊಂಡಿದೆ ,