ಉಮೇಶ್ ಯಾದವ್.. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಬೌಲರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ಉಮೇಶ್ ಯಾದವ್ ಅವರು ಇದುವರೆಗೂ ನೀಡಲ್ಲ. ಎಷ್ಟೋಬಾರಿ ಉಮೇಶ್ ಯಾದವ್ ಅವರನ್ನು ತಂಡದಿಂದ ಕೈ ಬಿಟ್ಟರೆ ಒಳ್ಳೆಯದು ಬೇರೆ ಒಳ್ಳೆಯ ಬೌಲರ್ ಆರ್ಸಿಬಿ ತಂಡಕ್ಕೆ ಬೇಕು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದೂ ಇದೆ.
ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಉಮೇಶ್ ಯಾದವ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹೌದು ಉಮೇಶ್ ಯಾದವ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅನ್ ಫಾಲೋ ಮಾಡಿದ್ದಾರೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ಸ್ಟಾಗ್ರಾಂ ಖಾತೆಯನ್ನು ಉಮೇಶ್ ಯಾದವ್ ಅವರು ಫಾಲೋ ಮಾಡಲು ಶುರುಮಾಡಿದ್ದಾರೆ.
ಇದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಉಮೇಶ್ ಯಾದವ್ ಅವರನ್ನು ಟ್ರೇಡಿಂಗ್ ಮುಖಾಂತರ ಬೆಂಗಳೂರು ದಂಡದಿಂದ ಚೆನ್ನೈ ತಂಡ ಖರೀದಿಸುವುದು ಪಕ್ಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು ಉಮೇಶ್ ಯಾದವ್ ಅವರ ಈ ಕೆಲಸಗಳನ್ನು ಗಮನಿಸಿದರೆ ಅವರ ಚೆನ್ನಯ್ಯ ತಂಡಕ್ಕೆ ಸೇರುವುದು ಪಕ್ಕ.. ಇನ್ನು ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ರಾಜಸ್ಥಾನ ತಂಡದಿಂದ ಚೆನ್ನೈ ತಂಡಕ್ಕೆ ಟ್ರೇಡಿಂಗ್ ಮುಖಾಂತರ ಈಗಾಗಲೇ ಖರೀದಿ ಮಾಡಲಾಗಿದೆ, ಇದೀಗ ಉಮೇಶ್ ಯಾದವ್ ಅವರ ಸರತಿ…