ಆರ್‌ಸಿಬಿ ವಿರುದ್ಧ ಸೋತು ತನ್ನ ಕೆಟ್ಟ ದಾಖಲೆ ಮುಂದುವರಿಸಿದ ಮುಂಬೈ!

0
67

ಐಪಿಎಲ್ ಇತಿಹಾಸದಲ್ಲಿ 5 ಬಾರಿ ಚಾಂಪಿಯನ್ ಆಗಿ ಬಲಿಷ್ಠ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇತರೆ ಐಪಿಎಲ್ ತಂಡಗಳು ಮಾಡದಿರುವ ಕೆಟ್ಟ ದಾಖಲೆಯನ್ನು ಮಾಡಿ ತನ್ನ ಹೆಸರಿಗೆ ಬರೆದುಕೊಂಡಿದೆ ಮತ್ತು ಈ ವರ್ಷವೂ ಸಹ ಅದನ್ನು ನಿಲ್ಲಿಸದೆ ಮುಂದುವರಿಸಿರುವುದು ಮುಂಬೈ ಅಭಿಮಾನಿಗಳ ಪಾಲಿಗೆ ಬೇಸರದ ಸಂಗತಿ. 2013ರಿಂದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಮುಂಬೈ ಇಂಡಿಯನ್ಸ್ ತಂಡ ಆಡಿರುವ ಮೊದಲನೆ ಪಂದ್ಯಗಳ ಪೈಕಿ ಒಂದು ಪಂದ್ಯವನ್ನೂ ಸಹ ಗೆಲ್ಲಲಾಗಿಲ್ಲ.

ಹೀಗಾಗಿ ಐಪಿಎಲ್ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡ ಚೊಚ್ಚಲ ಪಂದ್ಯವನ್ನು ಸೋತಿರುವಷ್ಟು ಬಾರಿ ಬೇರೆ ಯಾವುದೇ ತಂಡಗಳು ಸಹ ಸೋತಿಲ್ಲ. 2013ರಿಂದ ಇಲ್ಲಿಯವರೆಗೂ ಸತತ 9 ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಚೊಚ್ಚಲ ಪಂದ್ಯವನ್ನು ಸೋಲುವುದರ ಮೂಲಕ ಕೆಟ್ಟ ದಾಖಲೆಯೊಂದನ್ನು ಮುಂದುವರಿಸಿದೆ. 2013ರಿಂದ ಮುಂಬೈ ಇಂಡಿಯನ್ಸ್ ತಂಡ ತನ್ನ ಚೊಚ್ಚಲ ಪಂದ್ಯವನ್ನು ಯಾವ ತಂಡಗಳ ವಿರುದ್ಧ ಸೋತಿದೆ ಎಂಬ ಮಾಹಿತಿ ಮುಂದೆ ಇದೆ ನೋಡಿ.

 

 

2013ರಲ್ಲಿ ಆರ್‌ಸಿಬಿ ವಿರುದ್ಧ ಸೋಲು, 2014ರಲ್ಲಿ ಕೆಕೆಆರ್ ವಿರುದ್ಧ ಸೋಲು, 2015ರಲ್ಲಿ ಮತ್ತೆ ಕೆಕೆಆರ್ ವಿರುದ್ಧ ಸೋಲು, 2016ರಲ್ಲಿ ಪುಣೆ ವಿರುದ್ಧ ಸೋಲು, 2017ರಲ್ಲಿಯೂ ಪುಣೆ ವಿರುದ್ಧ ಸೋಲು, 2018ರಲ್ಲಿ ಚೆನ್ನೈ ವಿರುದ್ಧ ಸೋಲು, 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು, 2020ರಲ್ಲಿ ಚೆನ್ನೈ ವಿರುದ್ಧ ಸೋಲು ಮತ್ತು ಪ್ರಸ್ತುತ ನಡೆಯುತ್ತಿರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವಿರುದ್ಧ ಮುಂಬೈ ತನ್ನ ಚೊಚ್ಚಲ ಪಂದ್ಯವನ್ನು ಸೋತಿದೆ.

LEAVE A REPLY

Please enter your comment!
Please enter your name here