ಆಸ್ಪತ್ರೆಗಳಿಗೆ ಹೋದ್ರೆ ಆಸ್ತಿ ಮಾರ ಬೇಕಾದ ಪರಿಸ್ಥಿತಿ ಬರೋದು ಯಾಕೆ ಗೊತ್ತಾ?

Date:

ಆಸ್ಪತ್ರೆಗಳಿಗೆ ಹೋದ್ರೆ ಆಸ್ತಿ ಮಾರ ಬೇಕಾದ ಪರಿಸ್ಥಿತಿ ಬರೋದು ಯಾಕೆ ಗೊತ್ತಾ?
ಈ ಸ್ಟೋರಿ ನಿಮಗೆ ಗೊತ್ತಿದೆ..! ಮೊನ್ನೆ ಮೊನ್ನೆ ಕೋಲ್ಕತ್ತಾ ಮೂಲದ ವ್ಯಕ್ತಿ ಒಬ್ಬರು ತನ್ನ ಪತ್ನಿಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಅವರಿಗೆ ಅಂಥಾ ದೊಡ್ಡ ಕಾಯಿಲೆ ಇಲ್ಲದಿದ್ದರೂ ಡಾಕ್ಟರ್​ ಡೈರೆಕ್ಷನ್ ಮೇರೆಗೆ ಅವರಿಗೆ ಆಪರೇಷನ್ ಮಾಡಿಸಲಾಯಿತು. ಅವರು ಡಿಸ್ಚಾರ್ಜ್ ಆದಾಗ ಬಂದ ಬಿಲ್ ಬರೋಬ್ಬರಿ 42 ಲಕ್ಷ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀಡಲಾಗದೆ ಆ ವ್ಯಕ್ತಿ ತನ್ನ ಬಳಿ ಇದ್ದ ಒಂದು ಫ್ಲಾಟ್ ಮಾರಿ ಆಸ್ಪತ್ರೆ ವೆಚ್ಚ ಬರಿಸಿದ್ರು.


ಇದು ಅವರೊಬ್ಬರ ಕಥೆ ಅಲ್ಲ ಆಸ್ಪತ್ರೆ ಮೆಟ್ಟಿಲೇರುವ ಬಹುತೇಕರ ಯಥೆ. ಅಷ್ಟಕ್ಕೂ ಆಸ್ಪತ್ರೆ ಅವರು ಅಷ್ಟು ಬಿಲ್ ಮಾಡುವುದು ಯಾಕೆ? ರೋಗ ಇಲ್ಲದಿದ್ದರೂ ಇದೆ ಎಂದು ಹೇಳುವುದು ಯಾಕೆ ಎನ್ನುತ್ತೀರಾ? ಅದಕ್ಕೆ ಕಾರಣ ಟಾರ್ಗೆಟ್​ ಸಿಸ್ಟಮ್.
ಹೌದು ದೊಡ್ಡ ಆಸ್ಪತ್ರೆಗಳಲ್ಲಿ ಡಾಕ್ಟರ್​ ಗಳಿಗೆ ಇಂತಿಷ್ಟೇ ಆಪರೇಷನ್ ಮಾಡಬೇಕು ಎನ್ನುವ ಟಾರ್ಗೆಟ್ ಕೊಟ್ಟಿರುತ್ತಾರೆ. ಆಸ್ಪತ್ರೆಗಳು ತಮ್ಮ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಟ್ಟಿರುತ್ತವೆ. ಷೇರುದಾರರುಗಳನ್ನು ಆಕರ್ಷಿಸಲು ಅವಯ ಹೆಚ್ಚು ಲಾಭ ತೋರಿಸಬೇಕು. ಅದಕ್ಕಾಗಿ ಅವರು ನುರಿತ ವೈದ್ಯರುಗಳಿಗೆ ಟಾರ್ಗೆಟ್ ನೀಡಿರುತ್ತಾರೆ. ಹಿಂದೆ ಐಸಿಯುನಲ್ಲಿಟ್ಟು ಹಣ ಸುಲಿಗೆ ಮಾಡುತ್ತಿದ್ದರು. ಈಗ ಆಪರೇಷನ್ ಹೆಸರಲ್ಲಿ ಕತ್ತರಿ ಹಾಕುತ್ತಿದ್ದಾರೆ.
ಇದನ್ನು ಸುಮ್ಮನೇ ಗೀಚಿರುವುದರಲ್ಲ…ಡಾ|| ಅರುಣ್ ಗಾಡ್ರೆ ಹಾಗೂ ಡಾ|| ಅಭಯ್ ಶುಕ್ಲಾ ಅವರು ಬರೆದಿರುವ Dissenting Diagnosis ಪುಸ್ತಕದಲ್ಲಿ ಈ ವಿಷಯವಿದ್ದು, ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ.
ಆಪರೇಷನ್ ದಂಧೆ ದೊಡ್ಡ ಆಸ್ಪತ್ರೆಗಳಲ್ಲಿ ಕಾಮನ್ ಆಗಿದ್ದು, ಡಾಕ್ಟರ್ ಗಳು, ಮ್ಯಾನೇಜ್ಮೆಂಟ್ ಜೊತೆಗೆ ಫಾರ್ಮಾ ಕಂಪನಿಗಳು ಶಾಮೀಲಾಗಿವೆ ಎಂದು ವರದಿಯಾಗಿದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...