ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಐಎಂಸಿ ಆಸ್ಪತ್ರೆಗೆ ಡಿವಿಎಸ್ ದಾಖಲಾಗಿದ್ದರು,ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಸದಾನಂದಗೌಡ ಅವರ ಆರೋಗ್ಯ ಸಮಸ್ಯೆಗೆ ಕೋವಿಡ್ ಕಾರಣವಾಯ್ತಾ ಎಂಬ ಪ್ರಶ್ನೆಗೆ ಸದಾನಂದಗೌಡ ಅವರು ಉತ್ತರ ನೀಡಿದರು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದ ಕಾರಣ ನಾನು ಅಸ್ವಸ್ಥನಾಗಿರಬಹುದು ಕಾರಣವಾಗಿರಬಹುದು. ಚಿತ್ರದುರ್ಗದಲ್ಲಿ ಅಸ್ವಸ್ಥಗೊಂಡ ತಕ್ಷಣ ನನ್ನ ಜೊತೆಗೆ ಇದ್ದವರು, ಅಧಿಕಾರಿಗಳು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿಗೆ ಸೇರಿದಿದ್ದರು. ಅಲ್ಲಿನ ವೈದ್ಯರು ಚಿಕಿತ್ಸೆ ಕೊಟ್ಟು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಡಿವಿಎಸ್ ಹೇಳಿಕೆ ನೀಡಿದ್ದಾರೆ.ಕೋವಿಡ್ ಸೋಂಕಿಗೆ ತುತ್ತಾಗಿದ್ದರಿಂದ ಹೀಗಾಗಿದೆ. ಪೋಸ್ಟ್ ಕೋವಿಡ್‌ನನ್ನ ಮೇಲೆ ತನ್ನ ಪ್ರಭಾವ ತೋರಿಸಿದೆ. ಹೀಗಾಗಿ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರು ಸ್ವಲ್ಪ ಜಾಗರೂಕರಾಗಿರಬೇಕು ಎಂದು ಕೋವಿಡ್‌ನಿಂದ ಚೇತರಿಸಿಕೊಂಡಿರುವವರಿಗೆ ಡಿವಿಎಸ್ ಸಲಹೆ ನೀಡಿದ್ದಾರೆ.