ಮಹಾರಾಷ್ಟ್ರದ ರಾಜಕೀಯದಲ್ಲಿ ಯಾವಗ ಎನಾಗುತ್ತದೆ ಎಂದು ಹೇಳಾಗುತ್ತಿಲ್ಲ ಕಳೆದ ವಾರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎನ್.ಸಿ.ಪಿ.ಯ ಅಜಿತ್ ಪವಾರ್ ಕೇವಲ ನಾಲ್ಕೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ತಾವು ಎನ್.ಸಿ.ಪಿ.ಯ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಅಜಿತ್ ಪವಾರ್ ಹೇಳಿದ್ದಾರೆ.
ಆರಂಭದಲ್ಲಿ ಶರದ್ ಪವಾರ್ ಮನವೊಲಿಕೆಗೂ ಜಗ್ಗದ ಅಜಿತ್ ಪವಾರ್ ಬಳಿಕ ಕುಟುಂಬ ಸದಸ್ಯರ ಒತ್ತಡಕ್ಕೆ ಕರಗಿ ತಮ್ಮ ನಿರ್ಧಾರ ಬದಲಿಸಿದ್ದಾರೆಂದು ಹೇಳಲಾಗಿದೆ. ಅದರಲ್ಲೂ ತಮ್ಮ ಚಿಕ್ಕಮ್ಮ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ತಾಯಿ ಕರೆ ಮಾಡಿ ಮಾತನಾಡಿದ ವೇಳೆ ಭಾವುಕರಾದ ಅಜಿತ್ ಪವಾರ್ ಕುಟುಂಬದ ತೀರ್ಮಾನಕ್ಕೆ ತಲೆ ಬಾಗುವುದಾಗಿ ತಿಳಿಸಿದರೆನ್ನಲಾಗಿದೆ.