‘ಆ’ ಬಗ್ಗೆ ಮಾತನಾಡಿದ ಯುವತಿ‌ ವಿಡಿಯೋ ವೈರಲ್ ! ಯೂಟ್ಯೂಬರ್ ಗಳು ಅರೆಸ್ಟ್

Date:

ಯುವತಿಯೊಬ್ಬಳ ಜೊತೆ ಲೈಂಗಿಕತೆಗೆ ಸಂಬಂಧಪಟ್ಟಂತೆ ಅಸಹ್ಯ ಹುಟ್ಟಿಸುವಂತೆ ಮಾತನಾಡಿಸಿದ ಚೆನ್ನೈ ಟಾಕ್‌ ಎಂಬ ತಮಿಳಿನ ಯೂಟ್ಯೂಬ್ ಚಾನೆಲ್‌ನ ಮೂವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಯುವತಿ ಮಾತನಾಡಿದ ವಿಡಿಯೋ ವೈರಲ್‌ ಆದ ಬಳಿಕ ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, ಶಾಸ್ತ್ರಿ ನಗರ ಪೊಲೀಸರು ಚಾನೆಲ್ ಮಾಲೀಕರಾದ ದಿನೇಶ್, ವಿಜೆ ಅಸೆನ್ ಬಾದ್‌ಶಾ ಮತ್ತು ವಿಡಿಯೋ ಜರ್ನಲಿಸ್ಟ್‌ ಅಜಯ್ ಬಾಬು ಅವರನ್ನು ಸಾರ್ವಜನಿಕ ಅಶ್ಲೀಲ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಬಂಧಿಸಲಾಗಿದೆ.

ಚೆನ್ನೈ ಟಾಕ್ಸ್ ಎಂಬ ತಮಿಳು ಯೂಟ್ಯೂಬ್ ಚಾನೆಲ್‌ನ ವಿಜೆ ಬಾದ್‌ ಶಾ ಎಂಬಾತ ಚೆನ್ನೈನ ಬಸಂತ್‌ ನಗರದಲ್ಲಿರುವ ಬೀಚ್‌ ಬಳಿ ಯುವತಿಯೊಬ್ಬಳನ್ನು ನಿಲ್ಲಿಸಿ, ಖಾಸಗಿ ಲೈಂಗಿಕತೆ ಸೇರಿ ಇನ್ನಿತರ ಅಸಹ್ಯ ಹುಟ್ಟಿಸುವಂತಹ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಯುವತಿ ಕೂಡ ಅತ್ಯಂತ ಕೀಳಾಗಿ ಉತ್ತರ ನೀಡಿದ್ದಾಳೆ.

ಆದರೆ ಯುವತಿಯ ಲೈಂಗಿಕತೆ ಬಗ್ಗೆಗ್ಗಿನ ಮಾತುಕತೆಯ ವಿಡಿಯೋ ಮಿಂಚಿನಂತೆ ತಮಿಳುನಾಡಿನಾದ್ಯಂತ ವೈರಲ್‌ ಆಗಿದೆ. ಅನೇಕರು ಯುವತಿಯ ಅಶ್ಲೀಲ ಉತ್ತರಗಳಿಗೆ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಯುವತಿ, ಶಾಸ್ತ್ರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದಾಳೆ.

ನನಗೆ ಚೆನ್ನೈ ಟಾಕ್‌ ಯೂಟ್ಯೂಬ್‌ ಚಾನೆಲ್‌ನವರು ಕರೆ ಮಾಡಿ ಈ ರೀತಿ ಮಾತನಾಡುವಂತೆ ಹೇಳಿದರು. ಇದಕ್ಕಾಗಿ ಹಣ ನೀಡುವುದಾಗಿಯೂ ತಿಳಿಸಿದ್ದರು. ಹೀಗಾಗಿ ಅವರು ಕರೆದ ಸ್ಥಳಕ್ಕೆ ತೆರಳಿ ನಾನು ಮಾತನಾಡಿದೆ. ಅಲ್ಲದೆ ನಮ್ಮ ನಡುವೆ ಯೂಟ್ಯೂಬ್‌ನ ವಿಡಿಯೋನ ಕಮೆಂಟ್‌ಗಳನ್ನು ತೋರಿಸದಂತೆ ಒಡಂಬಡಿಕೆ ಆಗಿತ್ತು.

ಆದರೆ ಇವರು ಕಮೆಂಟ್‌ ಆಫ್‌ ಮಾಡಿಲ್ಲ, ಅಲ್ಲದೆ ನಾನು ಮಾತನಾಡುವ ವಿಡಿಯೋವನ್ನು ಎಲ್ಲ ಯೂಟ್ಯೂಬ್‌ಗಳಿಗೆ ನೀಡಿ ನನ್ನ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಾರ್ವಜನಿಕ ಅಶ್ಲೀಲ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಮೂವರನ್ನು ಬಂಧಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...