ಆ ಹುಡುಗಿ ನನ್ನ ಹೃದಯ ಕದ್ದಿದ್ದಾಳೆ ಪ್ಲೀಸ್ ಮರಳಿಸಿ ಎಂದು ಪೊಲೀಸರಿಗೆ ದೂರ ಕೊಟ್ಟ ಭೂಪ..!!
ಪೊಲೀಸ್ ಠಾಣೆಯ ಮೆಟ್ಟಿಲನ್ನ ಎಂತೆಂತಹ ಪ್ರಕರಣಗಳು ಏರಿ ಬರುತ್ತಿವೆ ಎಂದರೆ, ಕೆಲವೊಮ್ಮೆ ಪೊಲೀಸರಿಗೂ ಯಾವ ರೀತಿ ಕೇಸ್ ದಾಖಲಿಸಿಕೊಳ್ಳುವುದು ಎಂಬುದೇ ಅರ್ಥವಾಗುವುದಿಲ್ಲ.. ಹೀಗೆ ಈ ಹಿಂದೆ ನಾಗ್ಪುರದ ಸ್ಟೇಷನ್ ಒಂದರಲ್ಲಿ ವಿಲಕ್ಷಣ ಘಟನೆ ನಡೆದಿದೆ.. ಮಹಾರಾಷ್ಟ್ರದ ಯುವಕನೊಬ್ಬ ಸೀದಾ ಪೊಲೀಸ್ ಠಾಣೆಗೆ ಹೋದವನೆ ನನ್ನ ಹೃದಯವನ್ನ ಮತ್ತೆ ಮರುಳಿಸಬೇಕು ಅಂತ ದೂರು ನೀಡಲು ಮುಂದಾಗಿದ್ದಾನೆ..
ನನ್ನ ಹೃದಯವನ್ನ ಹುಡುಗಿಯೊಬ್ಬಳು ಕದ್ದಿದ್ದಾಳೆ ಅವಳಿಂದ ನನ್ನ ಹೃದಯವನ್ನ ಮರಳಿಸುವಂತೆ ಕಂಪ್ಲೇಟ್ ನೀಡಲು ಮುಂದಾಗಿದ್ದನಂತೆ.. ಈ ವಿಚಾರವನ್ನ ಅಲ್ಲಿನ ಜಿಲ್ಲೆಯ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಅವರು ಇತ್ತೀಚಿಗೆ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.. ಇಂತಹ ಪ್ರಕರಣಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಕಾನೂನುಗಳಿಲ್ಲ ಎಂದು ಆತನ ಮನವೊಲಿಸಿ ವಾಪಸ್ ಕಳುಹಿಸುವಷ್ಟರಲ್ಲಿ ಪೊಲೀಸರಿಗೆ ಸಾಕಾಗಿ ಹೋಗಿತಂತೆ..