ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಬಹಳ ದಿನದಿಂದಲೂ ಚರ್ಚೆಯಲ್ಲಿದೆ. ಆದರೆ ಯಾವ ಸಿನಿಮಾ, ಯಾವಾಗ ಎಂಟ್ರಿ ಎನ್ನುವುದು ನಿಖರವಾಗಿ ತಿಳಿದಿರಲಿಲ್ಲ.
ಆದ್ರೀಗ, ಸಿಕ್ಕಿರುವ ಮಾಹಿತಿ ಪ್ರಕಾರ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸ್ಟಾರ್ ನಟನ ಚಿತ್ರದಲ್ಲಿ ನಟಿಸುತ್ತಿದ್ದು, ಒಂದು ಹಂತದ ಚಿತ್ರೀಕರಣ ಸಹ ಮುಗಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಬುಲೆಟ್ ಪ್ರಕಾಶ್ ವಾರಸುದಾರ ಸಹ ಚಿತ್ರರಂಗದಲ್ಲಿ ಮುಂದುವರಿಯುವ ಆಸೆ ನೆರವೇರುತ್ತಿದೆ. ಅಷ್ಟಕ್ಕೂ, ರಕ್ಷಕ್ ನಟಿಸುತ್ತಿರುವ ಸಿನಿಮಾ ಯಾವುದು? ಚೊಚ್ಚಲ ಸಿನಿಮಾದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ. ಮುಂದೆ ಓದಿ…
‘ಅಧ್ಯಕ್ಷ’ ಖ್ಯಾತಿಯ ಶರಣ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಪುತ್ರ ನಟಿಸುತ್ತಿದ್ದಾರೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಗುರುಶಿಷ್ಯರು’ ಚಿತ್ರದಲ್ಲಿ ಶರಣ್‌ಗೆ ಶಿಷ್ಯನ ಪಾತ್ರದಲ್ಲಿ ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ತರುಣ್ ಸುಧೀರ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಕಾರ್ಯನಿರ್ವಹಿಸುತ್ತಿದ್ದಾರೆ. ‘ಗುರುಶಿಷ್ಯರು’ ಚಿತ್ರದಲ್ಲಿ ಶರಣ್ ಗುರು ಪಾತ್ರದಲ್ಲಿದ್ದರೆ ಶಿಷ್ಯರ ಪಾತ್ರದಲ್ಲಿ ತುಂಬಾ ಜನ ಹುಡುಗರು ನಟಿಸುತ್ತಿದ್ದಾರೆ. ಅವರ ಪೈಕಿ ರಕ್ಷಕ್ ಸಹ ಒಬ್ಬರು. ಈಗಾಗಲೇ ರಕ್ಷಕ್ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಬಂದಿದ್ದಾರೆ.