ಇಂಡಿಗೋ ಫ್ಲೈಟ್ ರದ್ದತಿ ಹಿನ್ನೆಲೆ: ಪ್ರಯಾಣಿಕರಿಗೆ ಪರಿಹಾರವಾಗಿ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ

Date:

ಇಂಡಿಗೋ ಫ್ಲೈಟ್ ರದ್ದತಿ ಹಿನ್ನೆಲೆ: ಪ್ರಯಾಣಿಕರಿಗೆ ಪರಿಹಾರವಾಗಿ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ

ಇಂಡಿಗೋ ವಿಮಾನ ರದ್ದು (IndiGo Flights Cancel) ಹಿನ್ನೆಲೆಯಲ್ಲಿ ಅಂತರಾಜ್ಯ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ರೈಲುಗಳಲ್ಲಿ ಸೀಟುಗಳು ಸಿಗದೆ ಪರದಾಡುತ್ತಿದ್ದಾರೆ. ಖಾಸಗಿ ಬಸ್‌ಗಳ ದರವೂ ಗಗನಕ್ಕೇರಿರುವುದರಿಂದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡ ರೈಲ್ವೇ ಇಲಾಖೆ ಈಗಾಗಲೇ ಹೆಚ್ಚುವರಿ ಎಸಿ ಬೋಗಿಗಳನ್ನು ಸೇರಿಸಿದ್ದು, ಜೊತೆಗೆ ಇಂದಿನಿಂದ ದೆಹಲಿ, ಪುಣೆ ಮತ್ತು ಚೆನ್ನೈಗೆ ವಿಶೇಷ 8 ರೈಲುಗಳ ವ್ಯವಸ್ಥೆ ಮಾಡಲಾಗಿದೆ.


ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ರೈಲು ಸೌಲಭ್ಯ

ಬೆಂಗಳೂರಿನ ಕೆಎಸ್ಆರ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್, ಹಾಗೂ ಯಶವಂತಪುರ ರೈಲು ನಿಲ್ದಾಣಗಳಿಂದ ವಿಶೇಷ ರೈಲುಗಳು ಸಂಚರಿಸಲಿವೆ.

ಇಂದೇ ಬೆಳಗ್ಗೆ 7.00 ಗಂಟೆಗೆ ಯಶವಂತಪುರದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಕಡೆಗೆ ಮೊದಲ ವಿಶೇಷ ರೈಲು ಸಂಚಾರ ಆರಂಭವಾಗಿದೆ.

ಬೆಳಗ್ಗೆ 8:05 ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಚೆನ್ನೈಗೆ ವಿಶೇಷ ರೈಲು ಹೊರಟಿದೆ.

ರಾತ್ರಿ 7:30 ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಪುಣೆಗೆ ವಿಶೇಷ ರೈಲು ಸಂಚರಿಸಲಿದೆ.

ನಾಳೆಯೂ ಚೆನ್ನೈಗೆ ಹೆಚ್ಚುವರಿ ವಿಶೇಷ ರೈಲು ಸೇವೆ ನೀಡಲಾಗುತ್ತದೆ.


ಒಟ್ಟು 100 ಕ್ಕೂ ಹೆಚ್ಚು ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ

ರೈಲ್ವೇ ಇಲಾಖೆ ಬಿಡುಗಡೆ ಮಾಡಿದ ವಿವರಗಳು ಹೀಗಿವೆ ⬇️

ರೈಲು ಸಂಖ್ಯೆ ಮಾರ್ಗ ದಿನಾಂಕ / ಸಮಯ ತಲುಪುವ ಸಮಯ

06259 ಯಶವಂತಪುರ – ಹಜರತ್ ನಿಜಾಮುದ್ದೀನ್ 07.12.2025, ಬೆಳಿಗ್ಗೆ 7.00 08.12.2025, ಬೆಳಗಿನ 3.00
06260 ಹಜರತ್ ನಿಜಾಮುದ್ದೀನ್ – ಬೆಂಗಳೂರು ಕಂಟೋನ್ಮೆಂಟ್ 09.12.2025, ರಾತ್ರಿ 11.50 11.12.2025, ರಾತ್ರಿ 7.45
06263 ಕೆಎಸ್ಆರ್ ಬೆಂಗಳೂರು – ಪುಣೆ 07.12.2025, ರಾತ್ರಿ 7.30 08.12.2025, ಮಧ್ಯಾಹ್ನ 2.30
06264 ಪುಣೆ – ಬೆಂಗಳೂರು ಕಂಟೋನ್ಮೆಂಟ್ 08.12.2025, ಮಧ್ಯಾಹ್ನ 3.30 09.12.2025, ಬೆಳಗ್ಗೆ 9.30
06255 ಕೆಎಸ್ಆರ್ ಬೆಂಗಳೂರು – ಚೆನ್ನೈ ಎಗ್ಮೋರ್ 07.12.2025, ಬೆಳಗ್ಗೆ 8.05 ಮಧ್ಯಾಹ್ನ 2.45
06256 ಚೆನ್ನೈ ಎಗ್ಮೋರ್ – ಕೆಎಸ್ಆರ್ ಬೆಂಗಳೂರು 07.12.2025, ಮಧ್ಯಾಹ್ನ 3.45 ರಾತ್ರಿ 10.45
06255 ಕೆಎಸ್ಆರ್ ಬೆಂಗಳೂರು – ಚೆನ್ನೈ ಸೆಂಟ್ರಲ್ 08.12.2025, ಬೆಳಗ್ಗೆ 8.05 ಮಧ್ಯಾಹ್ನ 2.45
06256 ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು 08.12.2025, ಸಂಜೆ 4.10 ರಾತ್ರಿ 10.45

Share post:

Subscribe

spot_imgspot_img

Popular

More like this
Related

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್...

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು ರಾತ್ರಿ...

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಬೆಂಗಳೂರು: ಸಿದ್ದರಾಮಯ್ಯರ...

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...