ಇಂಡಿಯನ್ ಬ್ಲಾಕ್ ಬೆರ್ರಿ ಅಂತಲೇ ಫೇಮಸ್ ಆಗಿರೋ ನೇರಳೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ನೇರಳೆ ಹಣ್ಣು ಜಾಮೂನ್ನನ್ನು ಯಾರಯ ತಿಂದಿಲ್ಲಾ ಹೇಳಿ. ಹುಳಿ, ಸಿಹಿಯ ವಿಭಿನ್ನ ರುಚಿಯುಳ್ಳ ಈ ಹಣ್ಣನ್ನ ಚಪ್ಪರಿಸಿ ತಂದವರೇ ಹೆಚ್ಚು ಮಂದಿ. ಈ ಹಣ್ಣನ್ನು ತಿಂದಾಗ ಬಾಯನ್ನು ನೇರಳೆ ಬಣ್ಣಕ್ಕೆ ತಿರುಗಿಸುವ ಹಣ್ಣು. ಈ ಹಣ್ಣನ್ನು ಮತ್ತು ಹಣ್ಣಿನ ಜ್ಯೂಸ್ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯವೇ. ಇಂಡಿಯನ್ ಬ್ಲಾಕ್ ಬೆರ್ರಿ ಆರೋಕ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ರಾಮಬಾಣ ಅನ್ನೋದು ನಿಮಗೆ ಗೊತ್ತಾ..?
ಹೌದು.. ನೇರಳೆ ಹಣ್ಣು ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಎಣ್ಣೆ ಚರ್ಮದ ಸಮಸ್ಯೆ ನಿವಾರಿಸುತ್ತದೆ. ನೇರಳೆ ಹಣ್ಣಿನ ತಿರುಳು, ನೆಲ್ಲಿಕಾಯಿ ರಸ ಮತ್ತು ರೋಸ್ ವಾಟರ್ ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮುಖದಲ್ಲಿರುವ ಎಣ್ಣೆಯ ಅಂಶ ತೀರಾ ಕಡಿಮೆಯಾಗುತ್ತದೆ.
ನೇರಳೆ ಹಣ್ಣಿನ ಜ್ಯೂಸ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುತ್ತಿದ್ದರೇ ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶದಿಂದ ಸ್ಕಿನ್ ಗ್ಲೋ ಆಗುತ್ತೆ.
ಇತ್ತೀಚಿಗೆ ಎಲ್ಲಾರಿಗೂ ಪಿಂಪಲ್ ಜಾಸ್ತಿಯಾಗುತ್ತೆ. ಅದ್ರಲ್ಲೂ ಉಗುರು ಸೋಕಿ ಸೋಕಿ ಅದು ಕಪ್ಪು ಕಲೆಗೆ ತಿರುಗಿರುತ್ತೆ. ಆಗ ಅದನ್ನು ಹೋಗಲಾಡಿಸಲು ಪಡುವ ಸಾಹಸ ಕಡಿಮೆದ್ದಲ್ಲ. ಆದ್ರೆ ಅದನ್ನು ನೇರಳೆ ಹಣ್ಣಿನಿಂದ ಮುಕ್ತಿ ಹಾಡಬಹುದು. ಒಣಗಿದ ನೇರಳೆ ಹಣ್ಣಿನ ಬೀಜವನ್ನು ಪುಡಿ ಆದಿ ಅದಕ್ಕೆ ದನದ ಹಾಲನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಪಿಂಪಲ್ಗೆ ಹಚ್ಚಿಬೇಕು. ಬೆಳಗ್ಗೆ ಎದ್ದು ವಾಶ್ ಮಾಡುತ್ತಾ ಬರಬೇಕು. ಇದನ್ನು ನಿಯಮಿತವಾಗಿಪಾಲಿಸುತ್ತಾ ಬಂದ್ರೆ ಮೊಡವೆ ಮಂಗಮಾಯವಾಗುತ್ತೆ.
ಇಂಡಿಯನ್ ಬ್ಲಾಕ್ ಬೆರ್ರಿಯಲ್ಲಿ ಇಷ್ಟೊಂದು ಉಪಯೋಗನಾ..?
Date:






