ಇಂಡೋ – ಪಾಕ್ ಕ್ರಿಕೆಟ್ ಬಗ್ಗೆ ‘ಗಂಭೀರ’ ಮಾತು

Date:

ಪಾಕಿಸ್ತಾನ ಗಡಿಯಾಚೆಯಿಂದಲೇ ಪಿತೂರಿ ನಡೆಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುವುದನ್ನು ನಿಲ್ಲಿಸುವವರೆಗೂ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್‌ ನಡೆಯಬಾರದು ಎಂದು ಬಿಜೆಪಿ ಸಂಸತ್‌ ಸದಸ್ಯ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಭಾರತ ತಂಡಕ್ಕೆ 2007ರ ಟಿ20 ಕ್ರಿಕೆಟ್‌ ವಿಶ್ವಕಪ್ ಮತ್ತು 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಗೆದ್ದುಕೊಡುವಲ್ಲಿ ಗಂಭೀರ್‌ ಬಹುಮುಖ್ಯ ಪಾತ್ರ ವಹಿಸಿದ್ದರು. ಇದೀಗ ಇಂಡೊ-ಪಾಕಿಸ್ತಾನ ಕ್ರಿಕೆಟ್‌ ಕುರಿತಾಗಿ ಐಎಎನ್‌ಎಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, “ಕ್ರಿಕೆಟ್‌ ಇಲ್ಲಿ ಮುಖ್ಯವಲ್ಲ, ನಮ್ಮ ಸೈನಿಕರ ಜೀವ ಮುಖ್ಯ,” ಎಂದಿದ್ದಾರೆ.

“ದೇಶಕ್ಕಾಗಿ ಆಡಿ ಮತ್ತು ಟ್ರೋಫಿಗಳನ್ನು ಗೆದ್ದ ಮಾತ್ರಕ್ಕೆ ನಾನು ಯಾರೊಬ್ಬರಿಗೂ ಯಾವುದೇ ಒಳಿತನ್ನು ಮಾಡಿಲ್ಲ. ಆದರೆ ಪಾಕಿಸ್ತಾನದ ಗಡಿಯಲ್ಲಿ ಕಾಯುತ್ತಿರುವ ಅಥವಾ ಸಿಯಾಚಿನ್‌ನಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವವರನ್ನು ಒಮ್ಮೆ ನೋಡಿ. ಸಣ್ಣ ಪ್ರಮಾಣದ ಸಂಬಳಕ್ಕಾಗಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಕಾಯುತ್ತಿದ್ದಾರೆ. ನಮ್ಮ ದೇಶದ ನಿಜವಾದ ಹೀರೊಗಳು ಅವರೇ,” ಎಂದು ಗಂಭೀರ್‌ ಹೇಳಿದ್ದಾರೆ.

ಬಾಲ್ಯದಲ್ಲಿ ಗಂಭೀರ್‌ ಸೇನೆಗೆ ಸೇರುವ ಬಯಕೆ ಹೊಂದಿದ್ದರು. ಆದರೆ ಶಾಲಾ ದಿನಗಳಲ್ಲೇ ರಣಜಿ ಟ್ರೋಫಿ ಕ್ರಿಕೆಟ್‌ ಆಡಿದ್ದರಿಂದ ಪೋಷಕರ ಒತ್ತೆಯಂತೆ ಕ್ರಿಕೆಟ್‌ನಲ್ಲಿ ಮುಂದುವರಿಯುವಂತ್ತಾಯಿತು. “ದೇಶದ ಪರವಾಗಿ ನಿಲ್ಲಲು ಇದು ಮತ್ತೊಂದು ದಾರಿ ಎಂದು ನನಗನಿಸಿದ್ದ ಕಾರಣಕ್ಕೇ ಕ್ರಿಕೆಟ್‌ನಲ್ಲಿ ಮುಂದುವರಿಯಲು ಒಪ್ಪಿದೆ,” ಎಂದು ದಿಲ್ಲಿಯ ಪೂರ್ವ ವಲಯದಿಂದ ಲೋಕಸಭೆ ಸದಸ್ಯನಾಗಿ ಚುನಾಯಿತರಾಗಿರುವ ಗಂಭೀರ್‌ ಹೇಳಿದ್ದಾರೆ.

ಭಾರತೀಯ ಸೇನೆಯ ಮೇಲೆ ಅಪಾರ ಗೌರವ ಹೊಂದಿರುವ ಗೌತಮ್‌ ಗಂಭೀರ್‌ಗೆ ಗೌರವಾರ್ತ ಸೇನಾಧಿಕಾರಿ ಹುದ್ದೆಯನ್ನು ನೀಡಲಾಗಿತ್ತು. ಆದರೆ ಇದನ್ನು ಸ್ವೀಕರಿಸದೇ ಹೋದರು. ಇದನ್ನು ತಿರಸ್ಕರಿಸಿದ್ದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದರು. “ಯಾರೊಬ್ಬರೂ ಕೂಡ ಸೇನಯ ಸಮವಸ್ತ್ರವನ್ನು ಸುಮ್ಮನೆ ತೊಡಬಾರದರು. ಅದನ್ನು ಸಂಪಾದಿಸಬೇಕು. ಸಂಪಾದಿಸಿದೇ ಹಾಕಬಾರದು,” ಎಂದಿದ್ದಾರೆ.

“ನಾನು ರಾಜಕೀಯಕ್ಕೆ ಸೇರುವ ಮೊದಲೇ ಈ ಮಾತನ್ನು ಹೇಳಿದ್ದೇನೆ. 2011ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಶಾಹಿದ್‌ ಅಫ್ರಿದಿ ಜಮ್ಮು ಮತ್ತು ಕಾಶ್ಮೀರ ಸಲುವಾಗಿ ಟಾಸ್‌ ಗೆಲ್ಲಬೇಕಿತ್ತು (ಪಂದ್ಯದಲ್ಲಿ ಭಾರತ ಗೆದ್ದಿತ್ತು) ಎಂದಿದ್ದರು. ಇದೊಂದು ಮೂರ್ಖತನದ ಹೇಳಿಕೆ. ಪಾಕಿಸ್ತಾನದಲ್ಲಿನ ಸಮಸ್ಯೆಗಳ ಬಗ್ಗೆ ನಾವು ಮಾತನಾಡುವುದಿಲ್ಲ. ಅವರು ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಅವರ ಸಮಸ್ಯೆಗಳ ಕಡೆಗೆ ಗಮನ ನೀಡಬೇಕು,” ಎಂದು ಗಂಭೀರ್‌ ಗುಡುಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...