ನೀನಾಸಂ ಸತೀಶ್ ಅವರು ಇಂದಿನಿಂದ ಬ್ರಹ್ಮಚಾರಿಯಾಗಿದ್ದಾರೆ. ಅರೇ ಏನಿದು ಅಂದ್ರಾ? ಅವರ ಹೊಸ ಚಿತ್ರ ಬ್ರಹ್ಮಚಾರಿ ಚಿತ್ರೀಕರಣ ಆರಂಭವಾಗಿದೆ.
ಇಂದು ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಕಥೆ ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ಸಾಗಲಿದ್ದು ಹಲವಾರು ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆಯಲಿದೆ. ಅದಿತಿ ಪ್ರಭುದೇವ ಮೊದಲ ಬಾರಿಗೆ ಸತೀಶ್ ನೀನಾಸಂ ಜೊತೆಗೆ ನಟಿಸುತ್ತಿದ್ದು, ಬ್ರಹ್ಮಚಾರಿ ಸತೀಶ್ ಗೆ ನಾಯಕಿ.
ಅದಿತಿ ಗ್ರಂಥಪಾಲಕಿಯಾಗಿ ನಟಿಸುತ್ತಿದ್ದಾರೆ., ಸತೀಶ್ ಅವರ ಪಾತ್ರ ವಿಭಿನ್ನವಾಗಿರಲಿದ್ದು ಪಾತ್ರದ ಸೀಕ್ರೇಟ್ ಅನ್ನು ಚಿತ್ರ ತಂಡ ಬಿಟ್ಟು ಕೊಟ್ಟಿಲ್ಲ . ಬಾಂಬೆ ಮಿಠಾಯಿ’ ಮತ್ತು ‘ಡಬಲ್ ಇಂಜಿನ್’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಚಂದ್ರಮೋಹನ್ ಅವರು ಬ್ರಹ್ಮಚಾರಿಗೆ ನಿರ್ದೇಶಕರು. ಉದಯ್ ಮೆಹ್ತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಇಂದಿನಿಂದ ನೀನಾಸಂ ‘ಬ್ರಹ್ಮಚಾರಿ’..!
Date: